RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ : ಘನಹೋಮ, ಮಹಾಮೃತ್ಯುಂಜಯ ಹೋಮ ಮತ್ತು ಧನ್ವಂತರಿ ಹೋಮ ಕಾರ್ಯಕ್ರಮ

ಗೋಕಾಕ:ಕೊರೋನಾ ಹಿನ್ನೆಲೆ : ಘನಹೋಮ, ಮಹಾಮೃತ್ಯುಂಜಯ ಹೋಮ ಮತ್ತು ಧನ್ವಂತರಿ ಹೋಮ ಕಾರ್ಯಕ್ರಮ 

ಕೊರೋನಾ ಹಿನ್ನೆಲೆ : ಘನಹೋಮ, ಮಹಾಮೃತ್ಯುಂಜಯ ಹೋಮ ಮತ್ತು ಧನ್ವಂತರಿ ಹೋಮ ಕಾರ್ಯಕ್ರಮ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 6:

 

 

ಈ ಶತಮಾನದ ಮಹಾಮಾರಿ ಕೋವಿಡ್-19 ವೈರಸ್ ಹೊಡೆದೊಡಿಸುವ ಹೋರಾಟದಲ್ಲಿ ದೇಶದ ಜನತೆಯನ್ನು ಮಾನಸಿಕವಾಗಿ ಒಂದುಗೂಡಿಸಿ ಆತ್ಮಸ್ಥೈರ್ಯ ಜಾಗೃತಗೊಳಿಸುವ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ ದೀಪಪ್ರಜ್ವಲನೆಯ ಕರೆಗೆ ಪೂರಕವಾಗಿ ನಗರದ ‘ಜ್ಞಾನ ಮಂದಿರ’ ಆಧ್ಯಾತ್ಮ ಕೇಂದ್ರದಲ್ಲಿ ದೀಪಪ್ರಜ್ವಲನೆಯ ಜೊತೆಗೆ ಘನಹೋಮ, ಮಹಾಮೃತ್ಯುಂಜಯ ಹೋಮ ಮತ್ತು ಧನ್ವಂತರಿ ಹೋಮಗಳನ್ನು ನಡೆಸುವ ಮೂಲಕ ದೈವಿ ಸ್ವರೂಪದ ನಿಸರ್ಗ ಶಕ್ತಿಯನ್ನು ಬೇಡಿಕೊಳ್ಳಲಾಯಿತು.
ವೈಧಿಕ ಅರ್ಚಕ ಶ್ರೀ ವಿಜಯಶಾಸ್ತ್ರೀ ಹಿರೇಮಠ ರವರು ಸಾಯಂಕಾಲ 7-00 ಗಂಟೆಯಿಂದ 9-00 ಗಂಟೆಯವರೆಗೆ ಹೋಮ ಪೂಜೆ ನೆರವೆರಿಸಿದರು. ಈ ಸಂದರ್ಭದಲ್ಲಿ ಹೋಮ ಪೂಜೆಯನ್ನು ನಡೆಸಿ ಪೂರ್ಣಾಹುತಿ ನೀಡಿದ ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ, ಧರ್ಮದರ್ಶಿ ಶ್ರೀಮತಿ ಸುವರ್ಣಾ ಹೊಸಮಠ ರವರು ಮನುಕುಲದ ಅಸ್ಥಿತ್ವವನ್ನೇ ಪ್ರಶ್ನಿಸುವಂತಹ ರೀತಿಯಲ್ಲಿ ತನ್ನ ಕದಂಬ ಬಾಹುಗಳಿಂದ ಅಟ್ಟಹಾಸ ಮೆರೆಯುತ್ತಿರುವ ಕರೋನಾ ವೈರಸ್ ನಿರ್ಮೂಲನೆಯನ್ನು ದೈವೀ ಸ್ವರೂಪದ ನಿಸರ್ಗ ಶಕ್ತಿಗಳಾದ ಪಂಚಭೂತಗಳು ಮತ್ತು ಸಾಕ್ಷಾತ ಪರಶಿವನು ಮಾಡಿ ತಾವೇ ಸೃಷ್ಠಿಸಿರುವ ಈ ಮನುಕುಲವನ್ನು ರಕ್ಷಿಸಬೇಕೆಂದು ಭಗವಂತನಲ್ಲಿ ಬೇಡಿಕೊಂಡರು. ಇದೇ ಸಂದರ್ಭದಲ್ಲಿ ಹೋಮ ಮುಕ್ತಾಯವಾದ ಕೂಡಲೇ ಕತ್ತಲಲ್ಲಿ ದೀಪಪ್ರಜ್ವಲನೆ ಬೆಳಗಿಸಿದರು. ಬೆರಳೆನಿಕೆಯಷ್ಟು ಕುಟುಂಬ ಸದಸ್ಯರ ಸಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಯಿತು. ಕುಟುಂಬ ಸದಸ್ಯರುಗಳಾದ ಸಂಜಯ ಪೂಜಾರಿ, ಈರಣ್ಣಾ ಪೂಜಾರಿ, ಸತೀಶ ಪೂಜಾರಿ, ಮಹೇಶ್ವರಿ ಪೂಜಾರಿ, ಕಾವೇರಿ ಪೂಜಾರಿ ಭಾಗವಹಿಸಿದ್ದರು.

Related posts: