RNI NO. KARKAN/2006/27779|Saturday, October 19, 2024
You are here: Home » breaking news » ಬೆಟಗೇರಿ:ಲಾಕಡೌನ ಹಿನ್ನೆಲೆ : ಟೆಂಟ್ ಹಾಕಿ ಕುಲಗೋಡ ಪೊಲೀಸ್ ಪೇದೆಗಳ ಕರ್ತವ್ಯ

ಬೆಟಗೇರಿ:ಲಾಕಡೌನ ಹಿನ್ನೆಲೆ : ಟೆಂಟ್ ಹಾಕಿ ಕುಲಗೋಡ ಪೊಲೀಸ್ ಪೇದೆಗಳ ಕರ್ತವ್ಯ 

ಲಾಕಡೌನ ಹಿನ್ನೆಲೆ : ಟೆಂಟ್ ಹಾಕಿ ಕುಲಗೋಡ ಪೊಲೀಸ್ ಪೇದೆಗಳ ಕರ್ತವ್ಯ

 

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಎ 6 :

 

ವಿಶ್ವದಾದ್ಯಂತ ಹರಡಿರುವ ಕರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಹಾಕಲಾದ ಹಿನ್ನಲೆಯಲ್ಲಿ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಶನಿವಾರ ಏ.4 ರಂದು ಸಂಜೆ ಪೊಲೀಸ್ ಟೆಂಟ್ ಹಾಕಿ ಕುಲಗೋಡ ಪೊಲೀಸ್ ಪೇದೆಗಳು ಹಗಲಿರುಳು ನಿರಂತರ ಕರ್ತವ್ಯ ನಿರತ ಕಾರ್ಯ ನಡೆದಿದೆ.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕುಲಗೋಡ ಪೊಲೀಸ್ ಠಾಣೆ ಅವರ ಸಹಕಾರದ ಸಹಯೋಗದಲ್ಲಿ ಶನಿವಾರ ಏ.4ರಿಂದ ಬುಧವಾರ ಏ.8ರವರೆಗೆ ನಾಲ್ಕು ದಿನಗಳ ಕಾಲ ಬೆಟಗೇರಿ ಗ್ರಾಮಕ್ಕೆ ವಿಶೇಷ ದಿಗ್ಬಂದನ್ ಹಾಕಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದಂತೆ ಏ.14ರವರೆಗೆ ಲಾಕ್‍ಡೌನ್ ಮುಂದುವರೆಯಲಿದೆ.
ಗ್ರಾಮಕ್ಕೆ ವಿಶೇಷ ದಿಗ್ಬಂದನ್ ಹಾಕಲಾದ ಹಿನ್ನಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಏ.8ರ ಬುಧವಾರದವರೆಗೆ ಬೆಳಗ್ಗೆ 6ರಿಂದ 8ಗಂಟೆಯ ತನಕ ನೀರು, ದನಕರುಗಳಿಗೆ ಮೇವು, ಹಾಲು ಹಾಕುವ ಮತ್ತು ತರುವವರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಕೇವಲ ಆಸ್ಪತ್ರೆ, ಔಷಧ ಮಳಿಗೆಗಳು ಹೊರತುಪಡಿಸಿ, ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಾಗಿಲು ತೆರೆಯದೇ ಬಂದ್ ಮಾಡಲಾಗಿದೆ. ಗ್ರಾಮಕ್ಕೆ ಬೇರೆ ಹಳ್ಳಿಗಳಿಂದ ಯಾರೂ ಬರಕೂಡದು, ಸ್ಥಳೀಯರು ಸಹ ಬೇರೆ ಊರುಗಳಿಗೆ ಹೋಗಬಾರದು. ಎಲ್ಲರೂ ಮನೆಯಲ್ಲಿದ್ದು, ಕರೊನಾ ಗೆಲ್ಲೂನಾ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ ಸ್ಥಳೀಯರಿಗೆ ಹೇಳಿದ್ದಾರೆ.
ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನಮಂತ ನರಳೆ ಅವರ ಮಾರ್ಗದರ್ಶನದಂತೆ ಸ್ಥಳೀಯ ಬೀಟ್ ಪೊಲೀಸ್ ಪೇದೆ ಬಿ.ಬಿ.ಬಿರಾದಾರ, ನಾಗಪ್ಪ ದುರದುಂಡಿ ಹಾಗೂ ಪೊಲೀಸ್ ಪೇದೆಗಳು ಗ್ರಾಮದಲ್ಲಿ ಕರ್ತವ್ಯ ನಿರತರಾಗಿ ಗ್ರಾಮದೆಲ್ಲಡೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನವಶ್ಯಕ ತಿರಗಾಡುವವರಿಗೆ, ದ್ವಿಚಕ್ರ ವಾಹನ ಸವಾರರಿಗೆ ಖಡಕ್ ಸೂಚನೆ ನೀಡಿ ಮನೆಯಲ್ಲಿರುವಂತೆ ಸಲಹೆ ನೀಡುತ್ತಿದ್ದಾರೆ. ಶನಿವಾರ-ರವಿವಾರದಿಂದ ಗ್ರಾಮದೆಲ್ಲಡೆ ಸ್ತಬ್ಧ್ ವಾತಾವಾರಣ ಕಾಣುತ್ತಿದೆ. ಪ್ರಮುಖ ಓಣಿ ಬೀದಿ, ಸ್ಥಳಗಳು ಬೀಕೂ ಎನ್ನುತ್ತಿವೆ.
ಈ ವೇಳೆ ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಪೊಲೀಸ್ ಪೇದೆ ಬಿ.ಬಿ.ಬಿರಾದಾರ, ನಾಗೇಶ ದುರದುಂಡಿ, ಶ್ರೀಧರ ದೇಯಣ್ಣವರ, ಮಲ್ಲಪ್ಪ ಪಣದಿ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಈರಣ್ಣ ದಂಡಿನ, ಶಿವಾನಂದ ಐದುಡ್ಡಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಸ್ಥಳೀಯರು ಇದ್ದರು.

Related posts: