ಕೌಜಲಗಿ:ಕೌಜಲಗಿಯಲ್ಲಿ ಅಲೆಮಾರಿಗಳಿಗೆ ದಿನಸಿ ವಸ್ತುಗಳ ವಿತರಣೆ
ಕೌಜಲಗಿಯಲ್ಲಿ ಅಲೆಮಾರಿಗಳಿಗೆ ದಿನಸಿ ವಸ್ತುಗಳ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಕೌಜಲಗಿ ಎ 6 :
ಗೋಕಾಕ ತಾಲೂಕಾ ಆಡಳಿತ ಹಾಗೂ ಕೌಜಲಗಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ರವಿವಾರದಂದು ಅಲೆಮಾರಿ ಸಮುದಾಯಕ್ಕೆ ನಿತ್ಯದ ದಿನಸಿ ವಸ್ತುಗಳನ್ನು ವಿತರಿಸಲಾಯಿತು.
ಪಟ್ಟಣದ ಗ್ರಾಮ ಪಂಚಾಯತ ಆವರಣದಲ್ಲಿ ಕೌಜಲಗಿಯಲ್ಲಿ ವಾಸವಾಗಿದ್ದ ಅಲೆಮಾರಿಗಳಾದ ದುರ್ಗಮುರ್ಗಿಯರು, ರಾಝಸ್ತಾನಿಗಳಿಗೆ ಕೊರೊನಾ ಸೊಂಕು ಹರಡುವಿಕೆಯಿಂದಾಗಿ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್ ಪರಿಣಾಮವಾಗಿ ಅಲೆಮಾರಿಗಳ ಉಪಜೀವನ ಕಷ್ಟವಾಗಿದ್ದನ್ನು ಅರಿತ ತಾಲೂಕಾಡಳಿತದ ಪರವಾಗಿ ಕೌಜಲಗಿ ಉಪತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಅವರು ನಿತ್ಯ ಜೀವನಕ್ಕೆ ಅವಶ್ಯವಾದ ಅಕ್ಕಿ, ಬೇಳೆ, ಸಾಬೂನು, ಸಾಬೂನು ಪುಡಿ, ಚಹಾಪುಡಿ, ಸಕ್ಕರೆ, ಬಿಸ್ಕೇಟ್ ಮುಂತಾದವುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ರಾಜೇಂದ್ರ ಸಣ್ಣಕ್ಕಿ, ಗ್ರಾ.ಪಂ. ಅಧ್ಯಕ್ಷ ರಮಜಾನ ಮುಲ್ತಾನಿ (ಪೋದಿ), ತಾ.ಪಂ. ಸದಸ್ಯ ಶಾಂತಪ್ಪ ಹಿರೇಮೇತ್ರಿ, ಕೌಜಲಗಿ ಕಂದಾಯ ನಿರೀಕ್ಷಕ ಎಂ.ಐ. ಹಿರೇಮಠ ಕೊರೊನಾ ನೋಡಲ್ ಅಧಿಕಾರಿ ಎಚ್.ಎಸ್.ಕಾಕಂಡಿಕಿ, ಶಿವಾನಂದ ಲೋಕನ್ನವರ, ನೀಲಪ್ಪ ಕೇವಟಿ, ರಾಯಪ್ಪ ಬಳೋಲದಾರ, ಗ್ರಾ.ಪಂ. ಕಾರ್ಯದರ್ಶಿ ಎಚ್.ಬಿ. ಲಿಂಬೋಜಿ, ರಾಮಣ್ಣ ಈಟಿ, ಜಕೀರಸಾಬ ಜಮಾದಾರ, ಗ್ರಾ.ಪಂ. ಮತ್ತು ಕೌಜಲಗಿ ನಾಡಕಚೇರಿ ಸಿಬ್ಬಂದಿ ವರ್ಗ ಹಾಜರಿದ್ದರು.