ಗೋಕಾಕ:ಏಕಕಾಲಕ್ಕೆ 5 ಸಾವಿರ ವಿಧ್ಯಾರ್ಥಿಗಳಿಂದ ರಾಷ್ಟ್ರಗೀತೆ : 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿನೂತನ ಪ್ರಯೋಗ
ಏಕಕಾಲಕ್ಕೆ 5 ಸಾವಿರ ವಿಧ್ಯಾರ್ಥಿಗಳಿಂದ ರಾಷ್ಟ್ರಗೀತೆ : 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿನೂತನ ಪ್ರಯೋಗ
ಗೋಕಾಕ ಅ 15: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ 71ನೇ ಸ್ವಾತಂತ್ರ್ಯೋತ್ಸವ ನಿಮಿತ್ಯ ಸುಮಾರು 5 ಸಾವಿರ ವಿಧ್ಯಾರ್ಥಿಗಳು ಒಂದೇಡೆ ಸೇರಿ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಿದು ಎಲ್ಲರ ಗಮನ ಸೆಳೆಯಿತು
ಗೋಕಾಕ ವಲಯ ಕ್ಷೇತ್ರ ಶಿಕ್ಷಾಣಾಧಿಕಾರಿ ಶ್ರೀ ಜಿ.ಬಿ.ಬಳಗಾರ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ಮುಂಜಾನೆ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ ನಗರದ ವಿವಿಧ ಶಾಲೆಗಳ ವಿಧ್ಯಾರ್ಥಿ/ ನೀಯರು ಐವತ್ತು ಸಾಲುಗಳಲ್ಲಿ ಅರ್ಥ ಚಂದ್ರಾಕಾರದ ವೃತ್ತವನ್ನು ರಚಿಸಿ ರಾಷ್ಟ್ರಗೀತೆ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಜಿ.ಎಸ.ಮಳಗಿ , ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪಾ ಕಿತ್ತೂರ , ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ , ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜತ್ತಿ , ಎಪಿಎಂಸಿ ನಿರ್ದೇಶಕ ಬಸವರಾ ಸಾಯನ್ನವರ , ಜಿ.ಬಿ.ಬಳಗಾರ , ನಗರಸಭೆ ಸದಸ್ಯರಾದ ಎಸ.ಎ.ಕೋತವಾಲ , ಪರಶುರಾಮ ಭಗತ , ಅಶೋಕ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು