ಗೋಕಾಕ:ಹಂತ ಹಂತವಾಗಿ ಲಾಕಡೌನ ತೆರವುಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ ಸಲಹೆ
ಹಂತ ಹಂತವಾಗಿ ಲಾಕಡೌನ ತೆರವುಗೋಳಿಸಿ : ಶಾಸಕ ಸತೀಶ ಜಾರಕಿಹೊಳಿ ಸಲಹೆ
ಎ 14 ರ ನಂತರ ಅಂತರ ರಾಜ್ಯಗಳಿಂದ ಅಗತ್ಯ ವಸ್ತುಗಳ ಪೂರೈಕೆಗೆ ಅನುಮಾಡಿಕೊಡಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 8 :
ಎ 14 ರ ನಂತರ ಅಂತರ ರಾಜ್ಯಗಳಿಂದ ಅಗತ್ಯ ವಸ್ತುಗಳ ಪೂರೈಕೆಗೆ ಅನುಮಾಡಿಕೊಟ್ಟು ಹಂತ ಹಂತವಾಗಿ ಲಾಕಡೌನ ತೆರವುಗೋಳಿಸಲು ಕೇಂದ್ರ ಸರಕಾರ ಕ್ರಮ ಕೈಗೋಳ್ಳಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು
ಬುಧವಾರದಂದು ನಗರದ ತಮ್ಮ ಗೃಹ ಕಛೇರಿ ಹಿಲ್ ಗಾರ್ಡನ್ ನಲ್ಲಿ ನಗರಸಭೆ ಸದಸ್ಯರಿಗೆ ಮತ್ತು ಪತ್ರಕರ್ತರಿಗೆ ಸ್ಯಾನಿಟೈಜರ್ ವಿತರಿಸಿ ಅವರು ಮಾತನಾಡಿದರು
ಕೊರೋನಾ ಸೋಂಕು ಹರಡದಂತೆ ಮುಂಜಾಗೃತ ಕ್ರಮವಾಗಿ ಲಾಕಡೌನ ಒಂದೆ ದಾರಿಯಾಗಿದ್ದರು ಸಹ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಎ 14 ರ ನಂತರ ಲಾಕಡೌನವನ್ನು ಹಂತ ಹಂತವಾಗಿ ತೆರವುಗೋಳಿಸಿ ಅಂತರ ರಾಜ್ಯಗಳಿಂದ ಅಗತ್ಯ ವಸ್ತುಗಳನ್ನು ಸಾಗಾಣಿಕೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ಸರಕಾರದ ಮಟ್ಟದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ ಅದನ್ನು ಗಮನದಲ್ಲಿಟ್ಟುಕೊಂಡು ಕಛೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿ ಎಲ್ಲ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಬೇಕು.
ಚಪ್ಪಾಳೆ ಮತ್ತು ದೀಪ ಬೆಳಗುವದರಿಂದ ಕೊರೋನಾ ಹೋಗದು : ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳನ್ನು ತಗೆದುಕೊಂಡು ಲಾಕಡೌನ ಮತ್ತು ಸಾಮಾಜಿಕ ಅಂತರ ಕಾಯ್ದುಕೋಳ್ಳುವದು ಒಂದೆ ಉಳಿದ ದಾರಿ ಅದನ್ನು ಬಿಟ್ಟು ಅವೈಜ್ಞಾನಿಕವಾಗಿ ಚಪ್ಪಾಳೆ ಮತ್ತು ದೀಪಬೆಳಗಿಸುವದು ಸರಿಯಾದ ಕ್ರಮವಲ್ಲ. ಇದು ವೈಜ್ಞಾನಿಕ ಕ್ರಮವಾಗಿದ್ದರೆ ಖಂಡಿತವಾಗಿ ಅದನ್ನು ಸ್ವಾಗತಿಸಬಹುದು ಎಂದು ಸತೀಶ ಜಾರಕಿಹೊಳಿ ಹೇಳಿದರು