ಘಟಪ್ರಭಾ:ಕಳಪೆ ಆಹಾರ : ಯೋಗ್ಯ ಕ್ರಮ ಕೈಗೊಳ್ಳಲು ಫಲಾನುಭವಿಗಳ ಆಗ್ರಹ
ಕಳಪೆ ಆಹಾರ : ಯೋಗ್ಯ ಕ್ರಮ ಕೈಗೊಳ್ಳಲು ಫಲಾನುಭವಿಗಳ ಆಗ್ರಹ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 9 :
ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ ನಂ.15 ರಲ್ಲಿ ಬರುವ ಅಂಗನವಾಡಿ ಕೇಂದ್ರ ಸಂಖ್ಯೆ-453ರಲ್ಲಿ ಚಿಕ್ಕ ಮಕ್ಕಳಿಗೆ ವಿತರಸಿಲಾಗುವ ಪೌಷ್ಠಿಕ ಆಹಾರ ಕಳಪೆ ಮಟ್ಟದಾಗಿದೆ ಎಂದು ಆರೋಪ ಕೇಳಿ ಬಂದಿದೆ.
ಮಲ್ಲಾಪೂರ ಪಿ.ಜಿ ಪಟ್ಟಣದ ಹಿರಿಯ ಸರ್ಕಾರಿ ಕನ್ನಡ ಶಾಲೆಯ ಪಕ್ಕದಲ್ಲಿರುವ ಅಂಗನವಾಡಿಯಲ್ಲಿ ಗುರುವಾರದಂದು ಚಿಕ್ಕ ಮಕ್ಕಳು, ಗರ್ಭಿಣಿಯರು ಹಾಗೂ ಬಾನಂತಿಯರಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರದಲ್ಲಿ ಹೆಸರುಕಾಳು 500 ಗ್ರಾಮ, ತೊಗರಿ ಬೇಳೆ 250 ಗ್ರಾಮ, ಅಕ್ಕಿ 1500 ಗ್ರಾಮ, ಸಕ್ಕರೆ 250 ಗ್ರಾಮ, ಬೆಲ್ಲ 250 ಗ್ರಾಮ, ಶೆಂಗಾ ಕಾಳು 250 ಗ್ರಾಮ, ಹಾಲಿನ ಪಾವಡರ 100 ಗ್ರಾಮ ಇದ್ದು ಆಹಾರ ಧಾನ್ಯಗಳು ಬಹಳಷ್ಟು ಕಳಪೆ ಮಟ್ಟದಾಗಿವೆ. ಸಕ್ಕರೆಯಲ್ಲಿ ನೀರು ಬಿದ್ದ ಸಕ್ಕರೆ ಹಸಿಯಾಗಿದೆ. ತೊಗರಿ ಬೇಳೆ ತೀರಾ ಕಳಪೆಯಾಗಿದ್ದು, ಹೆಸರುಕಾಳಿನಲ್ಲಿ ಹುಳಗಳು ತುಂಬಿವೆ. ಬೆಲ್ಲದಲ್ಲಿ ಜೀನು ಹುಳಗಳು ಕಾಣಿಸಿಕೊಂಡಿದ್ದು, ಹುಳ ಕಚ್ಚಿಕೊಂಡ ಜನ ಆಸ್ಪತ್ರೆ ಸೇರಬೇಕಾಗಿದೆ.
ಕಾಟಾಚಾರಕ್ಕಾಗಿ ಇಂತಹ ಆಹಾರ ವಿತರಿಸುವ ಅಗತ್ಯ ಏನಿತ್ತು ಎಂದು ಪಾಲಕಕು ಆರೋಪಿಸುತ್ತಿದ್ದಾರೆ. ಕೂಡಲೇ ಸಂಬಂದಿಸಿದ ಅಧಿಕಾರಿಗಳು ಈ ಬಗ್ಗೆ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.
ಮಲ್ಲಾಪೂರ ಪಿ.ಜಿ ಪಟ್ಟಣ ಅಂಗನವಾಡಿ ಕೇಂದ್ರ ಸಂಖ್ಯೆ-453 ರ ಬಗ್ಗೆ ಈ ರೀತಿ ಮೇಲಿಂದ ಮೇಲೆ ಅರೋಪಗಳು ಕೇಳಿ ಬರುತ್ತ್ತಿವೆ. ಕೂಡಲೇ ಮೇಲ್ವಿಚಾರಕರನ್ನು ಕಳುಹಿಸಿ ಯೋಗ್ಯ ಕ್ರಮ ಕೈಗೊಳ್ಳಲಾಗುವುದು.
ವಾಯ್.ಎಂ.ಗುಜನಟ್ಟಿ, ಸಿಡಿಪಿಒ ಮೂಡಲಗಿ