ಗೋಕಾಕ:ಕೊರೋನಾ ಹಿನ್ನೆಲೆ : ಪ್ರಧಾನಿಗೆ ಪತ್ರ ಬರೆದು ವಿನಂತಿಸಿದ ಗೋಕಾಕಿನ ಹೋಮಿಯೋಪತಿ ವೈದ್ಯ
ಕೊರೋನಾ ಹಿನ್ನೆಲೆ : ಪ್ರಧಾನಿಗೆ ಪತ್ರ ಬರೆದು ವಿನಂತಿಸಿದ ಗೋಕಾಕಿನ ಹೋಮಿಯೋಪತಿ ವೈದ್ಯ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 12 :
ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾ ಕಾಯಿಲೆಗೆ ಹೋಮಿಯೋಪತಿಯಲ್ಲಿ ಗುಣಪಡಿಸಲು ಸಾಧ್ಯವಿದೆ ಈ ನಿಟ್ಟಿನಲ್ಲಿ ಸರಕಾರ ಹೋಮಿಯೋಪತಿ ಔಷಧಿಯನ್ನು ಹಾಗೂ ವೈದ್ಯರನ್ನು ಕೊರೋನಾ ಚಿಕಿತ್ಸೆ ನೀಡಲು ಪ್ರಥಮ ಪ್ರಾಶಸ್ತ್ಯ ನೀಡಬೇಕು ಎಂದು ನಗರದ ಖ್ಯಾತ ಹೋಮಿಯೋಪತಿ ವೈದ್ಯ ಡಾ. ದಿನೇಶ ಕೌಶಿಕ (ಎಂ.ಡಿ ಹೋಮಿಯೋಪತಿ) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಹೋಮಿಯೋಪತಿ ಚಿಕಿತ್ಸೆಯಲ್ಲಿ ನಿಮೋನಿಯ್ಯಾ ರೋಗಕ್ಕೆ ಔಷಧಿ ಇದೆ ಇದರ ಮುಂದುವರೆದ ಭಾಗವೇ ಕೊರೋನಾ ವೈರಸ್ ಆಗಿದೆ. ವೈರಾಣು ಅಂಟಿದವರಲ್ಲಿಯ ರೋಗ ಲಕ್ಷಣಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ. ಸಾಮಾನ್ಯವಾಗಿ ನೆಗಡಿ, ಕೆಮ್ಮು, ಉಸಿರಾಟದ ತೊಂದರೆಗೆ ಹೋಮಿಯೋಪತಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಎಲ್ಲ ತರಹದ ಔಷಧಿಗಳು ಲಭ್ಯ ಇದ್ದು, ಅವುಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪ್ರಥಮ ಚಿಕಿತ್ಸೆಯಾಗಿ ನೀಡುವುದರ ಮೂಲಕ ತಡೆಗಟ್ಟಬಹುದಾಗಿದೆ. ಈ ವಿಧಾನವನ್ನು ಅಲ್ಲಗಳಿಯುವಂತ್ತಿಲ್ಲಾ ಎಂದು ಕಳೆದ ಒಂದು ವಾರದ ಹಿಂದೆ ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೊರೊನಾ ವೈರಸ್ ಇದು ಹೊಸ ರೋಗವೇನಲ್ಲಾ, ಇದಕ್ಕೆ ಕೋವಿಡ್-19 ಎಂಬ ಹೊಸ ತಲೆಬರಹ ನೀಡಲಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಭಯಬೀತರಾಗದೇ ಮುಂಜಾಗೃತಿಯನ್ನು ವಹಿಸಬೇಕು. ಈ ವೈರಸ್ ದಿನದಿಂದ ದಿನಕ್ಕೆ ತನ್ನ ಲಕ್ಷಣಗಳನ್ನು ಬದಲಾಯಿಸುತ್ತಿರುವುದರಿಂದ ಇದರ ಬಗ್ಗೆ ವೈದ್ಯಕೀಯ ವಿಜ್ಞಾನದಲ್ಲಿ ಔಷಧಿಗಳನ್ನು ಕಂಡು ಹಿಡಿಯಲು ವಿಳಂಬವಾಗುತ್ತಿದೆ. ಆದಷ್ಟು ಬೇಗ ವೈದ್ಯಕೀಯ ವಿಜ್ಞಾನದ ಪರಿಣಿತರು ಯಶಸ್ವಿಯಾಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಅವರು ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೂಡಾ ಪತ್ರದ ಮುಖಾಂತರ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ಕೊರೊನಾ ಕೋವಿಡ್-19ನ್ನು ತಡೆಗಟ್ಟಲು ಈಗ ದೇಶದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು ಇನ್ನೂ ಕೆಲ ದಿನಗಳವರಗೆ ವಿಸ್ತರಿಸಬೇಕು. ಸಾರ್ವಜನಿಕರು ಕೂಡಾ ಸರ್ಕಾರದ ನಿರ್ದೇಶನದ ಮೇರೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮನೆಯಲ್ಲಿ ಇರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.