ಘಟಪ್ರಭಾ:17 ವಾರ್ಡಗಳಲ್ಲಿ ಕೆ.ಎಮ್.ಎಫ್ ನಂದನಿ ಹಾಲು ವಿತರಣೆ
17 ವಾರ್ಡಗಳಲ್ಲಿ ಕೆ.ಎಮ್.ಎಫ್ ನಂದನಿ ಹಾಲು ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಎ 12 :
ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಿ ಸದಸ್ಯರು ಎಲ್ಲ 17 ವಾರ್ಡಗಳಲ್ಲಿ ಕೆ.ಎಮ್.ಎಫ್ ನಂದನಿ ಹಾಲಿನ ಪಾಕೇಟಗಳನ್ನು ರವಿವಾರದಂದು ವಿತರಿಸಿದರು.
ದೇಶ್ಯಾದಂತ ಲಾಕಡೌನ್ ಘೋಷಣೆ ಆಗಿದ್ದರಿಂದ ಕಡು ಬಡವರು ಹಾಗೂ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ದೃಷ್ಟಿಯಿಂದ ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ನಂದನಿ ಹಾಲಿನ ಪಾಕೇಟಗಳನ್ನು ಮನೆ ಮನೆಗೆ ತೆರಳಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮುನ್ನಾ ಪಾಚ್ಚಾಪೂರೆ, ಇಕಬಾಲ ಮೋಕಾಶಿ, ರಾಜು ದೊಡಮನಿ, ಬಾಪುಸಾಬ ಕಬ್ಬೂರ, ಉಸ್ಮಾನ ನಾಶಿಪೂಡಿ, ಅಬು ಮಕಾನದಾರ, ಶಾನೂರ ಡಾಂಗೆ, ಕಿಶೂರ ಪವಾರ, ಅಕ್ಬರ ಕಬ್ಬೂರ, ಯೂನೂಸ ಕಬ್ಬೂರ ಸೇರಿದಂತೆ ಅನೇಕರು ಇದ್ದರು.