RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ತಾಲೂಕಿನ ಗಡಿಗಳ ಭಾಗಗಳಲ್ಲಿ 7 ಚೆಕ್‍ಫೋಸ್ಟ ಸ್ಥಾಪನೆ : ತಹಶೀಲ್ದಾರ ಪ್ರಕಾಶ ಮಾಹಿತಿ

ಗೋಕಾಕ:ತಾಲೂಕಿನ ಗಡಿಗಳ ಭಾಗಗಳಲ್ಲಿ 7 ಚೆಕ್‍ಫೋಸ್ಟ ಸ್ಥಾಪನೆ : ತಹಶೀಲ್ದಾರ ಪ್ರಕಾಶ ಮಾಹಿತಿ 

ತಾಲೂಕಿನ ಗಡಿಗಳ ಭಾಗಗಳಲ್ಲಿ 7 ಚೆಕ್‍ಫೋಸ್ಟ ಸ್ಥಾಪನೆ : ತಹಶೀಲ್ದಾರ ಪ್ರಕಾಶ ಮಾಹಿತಿ

 

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 13 :

 

 

ತಾಲೂಕಿನ ಗಡಿಗಳಿಂದ ಒಳಬರುವ ಎಲ್ಲಾ ರಸ್ತೆಗಳಿಂದ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ತಡೆಯುವ ಸಲುವಾಗಿ, 7 ಚೆಕ್‍ಫೋಸ್ಟಗಳನ್ನು ತೆರೆಯಲಾಗಿದ್ದು, ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ, ಪರಿಶೀಲನೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರ ನಿರ್ದೇಶನದಂತೆ ಪೆÇೀಲಿಸ್, ವೈದ್ಯಕೀಯ ಹಾಗೂ ಇತರೆ ಇಲಾಖೆಯ ಸುಮಾರು 80 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು. ಮೂರು ಶಿಪ್ಟ್‍ಗಳಲ್ಲಿ ನಿರಂತರವಾಗಿ 24*7 ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ. ಅಲ್ಲದೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ನೇರವಾಗಿ ತಾಲೂಕಿನ ಒಳಗೆ ಬಿಟ್ಟುಕೊಳ್ಳದೇ ವೈದ್ಯಕೀಯ ಪರಿಶೀಲನೆಗೊಳಪಡಿಸಿ, 14 ದಿನಗಳ ಕ್ವಾರಂಟೈನ ಮಾಡಲಾಗುವುದು. ಹೊರಗಿನಿಂದ ಬರುವಂತಹ ಪ್ರಯಾಣಿಕರು ತಾಲೂಕಿನ ಯಾವ ಗ್ರಾಮಕ್ಕೆ ಬಂದರೂ ಸಹ ಈ ಬಗ್ಗೆ ಕೂಡಲೇ ಮಾಹಿತಿ ನೀಡಲು ಗ್ರಾಮ ಮಟ್ಟದ ಕಾರ್ಯ ಪಡೆ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ತಿಳಿಸಲಾಗಿದ್ದು, ಈ ಬಗ್ಗೆ ಗ್ರಾಮಮಟ್ಟದಲ್ಲಿ ಕೂಡಾ ನಿರಂತರವಾಗಿ ನಿಗಾವಹಿಸಲು ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗೋಕಾಕ ನಗರದ ವಿವಿಧೆಡೆ 14 ಬ್ಯಾರಿಕೇಡಗಳ ಮೂಲಕ ರಸ್ತೆ ನಿರ್ಭಂದ ಮಾಡಿ ಅನಗತ್ಯವಾಗಿ ಸಾರ್ವಜನಿಕರು ತಿರುಗಾಡುದಂತೆ ಕ್ರಮ ಜರುಗಿಸಲಾಗಿದೆ. ನಗರವನ್ನು ತಲುಪುವ ಯರಗಟ್ಟಿಯಿಂದ ಬರುವ ರಸ್ತೆಯಲ್ಲಿ (ಎಸ್4 ಹಾಸ್ಪಿಟಲ್) ಹತ್ತಿರ ಚೆಕ್‍ಪೋಸ್ಟ್ ನಿರ್ಮಿಸಿ ಒಳಬರುವ ಎಲ್ಲ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹಾಗೂ ಇತರೆ ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲಾಗಿದ್ದು ಸಾರ್ವಜನಿಕರು ಆತಂಕ ಪಡದೇ ತಾಲೂಕಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Related posts: