ಬೆಟಗೇರಿ:ಸ್ಥಳೀಯರು ತಮ್ಮ ಗ್ರಾಮಕ್ಕೆ ಸ್ವಯಂ ದಿಗ್ಬಂದನ್ ಹಾಕಿಕೊಳ್ಳಬೇಕು : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ
ಸ್ಥಳೀಯರು ತಮ್ಮ ಗ್ರಾಮಕ್ಕೆ ಸ್ವಯಂ ದಿಗ್ಬಂದನ್ ಹಾಕಿಕೊಳ್ಳಬೇಕು : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 14 :
ಬೇರೆ ನಗರ, ಪಟ್ಟಣ, ಹಳ್ಳಿಗಳಿಂದ ತಮ್ಮ ಗ್ರಾಮಕ್ಕೆ ಈಗ ಬರುವವರ ಮೇಲೆ ಸ್ಥಳೀಯರು ನಿಗಾ ಇಡಬೇಕು. ಗ್ರಾಮಸ್ಥರು ಸಹ ಬೇರೆ ಊರುಗಳಿಗೆ ಹೋಗಬಾರದು. ಸ್ಥಳೀಯರು ತಮ್ಮ ಗ್ರಾಮಕ್ಕೆ ಸ್ವಯಂ ದಿಗ್ಬಂದನ್ ಹಾಕಿಕೊಳ್ಳಬೇಕು ಎಲ್ಲರೂ ಮನೆಯಲ್ಲಿದ್ದು ಕರೊನಾ ಗೆಲ್ಲೂನಾ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ, ಗೋಕಾಕ ತಾಲೂಕಾ ಆಡಳಿತ, ಕುಲಗೋಡ ಪೊಲೀಸ್ ಠಾಣೆ ಹಾಗೂ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಅವರ ಸಹಯೋಗದಲ್ಲಿ ಗ್ರಾಮದಲ್ಲಿ ಸ್ಥಾಪಿಸಲಾದ ಪೊಲೀಸ್ ಚೆಕ್ ಪೊಸ್ಟ್‍ಗೆ ಮಂಗಳವಾರ ಏ.14 ರಂದು ಭೇಟಿ ನೀಡಿ ಮಾಹಿತಿ ಪರಿಶೀಲನೆ ಮಾಡಿ, ಪೊಲೀಸ್ ಚೆಕ್ ಪೊಸ್ಟ್‍ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಹಲವಾರು ಸಲಹೆ ಸೂಚನೆ ನೀಡಿದ ಬಳಿಕ ಮಾತನಾಡಿ, ರಾಜ್ಯದಲ್ಲಿ ಮಹಾಮಾರಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶಾದ್ಯಂತ ಹರಡುತ್ತಿರುವ ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.
ಗ್ರಾಮದಲ್ಲಿ ಸ್ಥಾಪಿಸಲಾದ ರು ಗೋಕಾಕ ಡಿವೈಎಸ್‍ಪಿ ಪ್ರಭು ಡಿ.ಟಿ ಅವರು ಮಾತನಾಡಿ, ಗ್ರಾಮದಲ್ಲಿ ಕಿರಾಣಿ ಅಂಗಡಿ ಹಾಗೂ ಹಾಲಿನ ಡೈರಿ ಬಾಗಿಲನ್ನು ನಿಗದಿತ ಅವಧಿಯಲ್ಲಿ ಮಾತ್ರ ತೆರೆಯಬೇಕು. ಬೈಕ್ ಮತ್ತು ಕಾಲ್ನಡೆಗೆಯಲ್ಲಿ ಅನವಶ್ಯಕವಾಗಿ ತಿರುಗಾಡುವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸ್ಥಳೀಯರಿಗೆ ಖಡಕ್ ಸೂಚನೆ ನೀಡಿದರು.
ಈ ವೇಳೆ ನೋಡಲ್ ಅಧಿಕಾರಿ ಜಿ.ಬಿ.ಬಳಿಗಾರ, ಗೋಕಾಕ ಟಿಎಚ್‍ಒ ಡಾ.ಆಂಟಿನ್, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಗ್ರಾಮಲೆಕ್ಕಾಧಿಕಾರಿ ಜೆ.ಎಮ್.ನದಾಫ್, ಪಿಎಚ್‍ಸಿ ವೈದ್ಯಾಧಿಕಾರಿ ರಾಜೇಶ್ವರಿ ಹಿರೇಮಠ, ಎಮ್.ವಿ.ಹಿರೇಮಠ, ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಕುತುಬು ಮಿರ್ಜಾನಾಯ್ಕ, ಶ್ರೀಧರ ದೇಯಣ್ಣವರ, ಸುರೇಶ ಬಾಣಸಿ ಸೇರಿದಂತೆ ಕುಲಗೋಡ ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳು, ಗ್ರಾಪಂ ಸಿಬ್ಬಂದಿ, ಸ್ಥಳೀಯರು, ಇದ್ದರು.