RNI NO. KARKAN/2006/27779|Thursday, December 12, 2024
You are here: Home » breaking news » ಬೆಟಗೇರಿ:ಮುಖ್ಯ ರಸ್ತೆಗಳಿಗೆ ಊರಿನ ಹೊರವಲಯದಲ್ಲಿ ನೂತನ ಸ್ವಾಗತ ಫಲಕ ನಿರ್ಮಾಣ

ಬೆಟಗೇರಿ:ಮುಖ್ಯ ರಸ್ತೆಗಳಿಗೆ ಊರಿನ ಹೊರವಲಯದಲ್ಲಿ ನೂತನ ಸ್ವಾಗತ ಫಲಕ ನಿರ್ಮಾಣ 

ಮುಖ್ಯ ರಸ್ತೆಗಳಿಗೆ ಊರಿನ ಹೊರವಲಯದಲ್ಲಿ ನೂತನ ಸ್ವಾಗತ ಫಲಕ ನಿರ್ಮಾಣ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಎ 15 :

 

 

 
ಗ್ರಾಮದ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಪಿಡಿಒ ಎಚ್.ಎನ್.ಬಾವಿಕಟ್ಟಿ ಹಾಗೂ ಹಿರಿಯ ನಾಗರಿಕರ ಮಾರ್ಗದರ್ಶನದಂತೆ ಇಲ್ಲಿಯ ಮುಖ್ಯ ರಸ್ತೆಗಳಿಗೆ ಊರಿನ ಹೊರವಲಯದಲ್ಲಿ ನೂತನ ಸ್ವಾಗತ ಫಲಕ ನಿರ್ಮಿಸಲಾಗಿದೆ.
ಡಾ.ಬೆಟಗೇರಿ ಕೃಷ್ಣಶರ್ಮರ ಜನ್ಮಸ್ಥಳಕ್ಕೆ ಸುಸ್ವಾಗತ ಅಂತಾ ಪ್ರಯಾಣಿಕರನ್ನು ಬರಮಾಡಿಕೊಳ್ಳುವ ಮತ್ತು ನಮಸ್ಕಾರ ಪುನ: ಬನ್ನಿ, ತಮ್ಮ ಪ್ರಯಾಣ ಸುಖಕರವಾಗಲಿ ಎಂದು ಬೀಳ್ಕೂಡುವ ನೂತನ ಸ್ವಾಗತ ಫಲಕಗಳನ್ನು ನಿರ್ಮಿಸಿ, ಬರಹ ಬರೆಸಿದ್ದಕ್ಕೆ ಗ್ರಾಮ ಪಂಚಾಯಿತಿದವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts: