ಗೋಕಾಕ:ನೂಡಲ್ ಅಧಿಕಾರಿಯ ಮೇಲೆ ಹಲ್ಲೆ. ಗ್ರಾಪಂ ಸದಸ್ಯ ಹಾಗೂ ಮಾಜಿ ತಾಪಂ ಸದಸ್ಯನ ಬಂಧನ.!
ನೂಡಲ್ ಅಧಿಕಾರಿಯ ಮೇಲೆ ಹಲ್ಲೆ. ಗ್ರಾಪಂ ಸದಸ್ಯ ಹಾಗೂ ಮಾಜಿ ತಾಪಂ ಸದಸ್ಯನ ಬಂಧನ.!
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 16 :
ಕರೋನಾ ಮಹಾಮಾರಿ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಉಚಿತವಾಗಿ ನೀಡುತ್ತಿರುವ ಪಡಿತರ ನಿರ್ವಹಣೆ ವೀಕ್ಷಿಸಲು ಆಗಮಿಸಿದ್ಧ ಸರಕಾರಿ ನೂಡಲ್ ಅಧಿಕಾರಿ ಅವರ ಮೇಲೆ ಹಲ್ಲೆ ಮಾಡಿದ ಇಬ್ಬರೂ ಆರೋಪಿಗಳನ್ನು ಅಂಕಲಗಿ ಪೊಲೀಸರು ಬುಧವಾರದಂದು ಬಂಧಿಸಿದ್ದು, ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ.
ಸರಕಾರಿ ನೌಕರರ ಕಾರ್ಯನಿರ್ವಾಹಣೆ ಅಡ್ಡಿಪಡಿಸಿದ ಆರೋಪದ ಮೇಲೆ ಅಂಕಲಗಿ ಗ್ರಾಮ ಪಂಚಾಯತ ಸದಸ್ಯ ಬೋರಪ್ಪಾ ಅನ್ನಪ್ಪ ತಳವಾರ (60) ಹಾಗೂ ಆತನ ಮಗನಾದ ಮಾಜಿ ತಾಪಂ ಸದಸ್ಯ ಸುಕುಮಾರ ಬೊರಪ್ಪಾ ತಳವಾರ (36) ಇವರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊರ್ವ ಆರೋಪಿ ಅಜ್ಜಪ್ಪ ಅಶೋಕ ತಳವಾರ (27) ಇತನ ಬಂಧನಕ್ಕಾಗಿ ಪೋಲಿಸರು ಜಾಲ ಬೀಸಿದ್ದಾರೆ. ಈ ಕುರಿತು ಅಂಕಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರೋನಾ ಮಹಾಮಾರಿಯಿಂದ ಇಡಿ ದೇಶವೇ ಲಾಕ್ ಡೌನ್ ಆಗಿದ್ದು, ಸರಕಾರ ನೀಡುತ್ತಿರುವ ಪಡಿತರ ವಿತರಣೆ ಬಗ್ಗೆ ಮಾಹಿತಿ ಪಡೆಯಲು ಬಂದ ನೂಡಲ್ ಅಧಿಕಾರಿಯ ಮೇಲೆ ಹಲ್ಲೆ ನಿಜಕ್ಕು ವಿಪರ್ಯಾಸವೇ ಸರಿ. ಈ ಹಲ್ಲೆ ಮಾಡಿದ ಆರೋಪಿಗಳ ಬೆನ್ನ ಹಿಂದೆ ಪ್ರಭಾವಿ ರಾಜಕೀಯ ವ್ಯಕ್ತಿಗಳ ಅಭಯಹಸ್ತವಿದೆ ಎಂದು ಸ್ಥಳೀಯ ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಸರಕಾರದ ನಿಯಮ ಪಾಲನೆ ಮಾಡುವ ರಾಜಕೀಯ ನಾಯಕರು ತಾಲೂಕಿನ ವಿವಿಧ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿ, ಕಾರ್ಯ ಮಾಡಲು ಅಡ್ಡಿ ಉಂಟು ಮಾಡುತ್ತಿರುವದು ಚರ್ಚೆಗೆ ಗ್ರಾಸವಾಗಿದೆ. ಇಂತಹ ಅಮಾನವಿಯ ಘಟನೆಗೆ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದು, ಇಂತವರ ಮೇಲೆ ಸರಕಾರ ಕಾನೂನು ಪ್ರಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.