RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ ಕೋವಿಡ್-19 ‌ ರೋಗದ ಬಗೆಗಿನ ಸುದ್ದಿ

ಗೋಕಾಕ:ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ ಕೋವಿಡ್-19 ‌ ರೋಗದ ಬಗೆಗಿನ ಸುದ್ದಿ 

ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದ ಕೋವಿಡ್-19  ‌ ರೋಗದ ಬಗೆಗಿನ ಸುದ್ದಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 17 :

ಇಂದು ಬೆಳಗಾಗುವಷ್ಟರಲ್ಲಿ ಕೋವಿಡ್-19 ರೋಗದ ಬಗೆಗಿನ ಸುದ್ದಿಯೊಂದು ಇಡೀ ನಗರವನ್ನು ಬೆಚ್ಚಿ ಬೀಳಿಸಿದ್ದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿತು.
covid19dashboard.karnataka.gov.in ಎಂಬ ಸರಕಾರದ ಅಧಿಕೃತ ವೆಬ್‍ಸೈಟ್‍ದಲ್ಲಿ ಬಂದ ಮಾಹಿತಿ ಪ್ರಕಾರ ಗೋಕಾಕ ತಾಲೂಕಿನಲ್ಲಿ ಕೊರೋನಾ ವೈರಸ್ ತಗುಲಿದ ಆರು ಜನ ರೋಗಿಗಳು ಇದ್ದಾರೆಂಬ ಮಾಹಿತಿ ಆಧರಿಸಿ ಪತ್ರಿಕೆಯಲ್ಲಿ ಬಂದ ವರದಿ ನೋಡಿ ಜನರು ಹೌಹಾರಿ ಹೋದರು. ಆದರೆ ಈ ಬಗ್ಗೆ ಸ್ಥಳೀಯ ತಾಲೂಕಾಡಳಿತವನ್ನು ಸಂಪರ್ಕಿಸಿದಾಗ ಗೋಕಾಕ ತಾಲೂಕಿನಲ್ಲಿ ಯಾವ ಕೋವಿಡ್-19 ರೋಗಿಗಳು ಇಲ್ಲವೆಂದು ತಿಳಿಸಿದರು.
ಇಂದಿನ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸರಕಾರದ ಅಧಿಕೃತ ವೆಬ್‍ಸೈಟ್‍ದಲ್ಲಿ ಬಂದ ಅಂಕಿ-ಅಂಶವನ್ನೇ ನಂಬದಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅತ್ಯಂತ ಖೇದಕರ ಸಂಗತಿಯಾಗಿದೆ.
ಸರಕಾರದ ವೆಬ್‍ಸೈಟ್‍ದಲ್ಲಿಯೇ ಈ ರೀತಿ ಸುಳ್ಳು ಸುದ್ದಿ ಪ್ರಕಟಿಸಿದ ಸಂಬಂಧವಾಗಿ ಸರಕಾರದಿಂದ ಹಾಗೂ ಜಿಲ್ಲಾಧಿಕಾರಿಗಳು ಸ್ಪಷ್ಟೀಕರಣ ನೀಡುವದು ಅವಶ್ಯಕವಾಗಿ ಪರಿಣಮಿಸಿದೆ. ಅಲ್ಲದೆ ಸರಕಾರದ ವೆಬ್‍ಸೈಟ್‍ನಲ್ಲಿ ತಪ್ಪು ವಿವರ ಪ್ರಕಟವಾಗಿದ್ದರ ಬಗ್ಗೆ ಸಂಬಂಧಪಟ್ಟವರ ಮೇಲೆ ಅವಶ್ಯಕ ಕ್ರಮ ಕೈಕೊಳ್ಳುವದು ಅವಶ್ಯಕವಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Related posts: