ಗೋಕಾಕ:ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಂಕಣಬದ್ದರಾಗಿ : ತಹಶೀಲ್ದಾರ್ ಜಿ.ಎಸ್.ಮಳಗಿ
ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಂಕಣಬದ್ದರಾಗಿ : ತಹಶೀಲ್ದಾರ್ ಜಿ.ಎಸ್.ಮಳಗಿ
ಗೋಕಾಕ ಅ 15: ಮಹಿಳೆಯರನ್ನು ಗೌರವ ಭಾವದಿಂದ ನೋಡುವ ಈ ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಜರಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ನಾವೆಲ್ಲರು ಕಂಕಣಬದ್ದರಾಗಬೇಕು ಎಂದು ತಹಶೀಲ್ದಾರ್ ಜಿ.ಎಸ.ಮಳಗಿ ಹೇಳಿದರು
ಅವರು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಮಾತನಾಡಿದರು
ಪ್ರತಿಯೋಬ್ಬ ಪ್ರಜೆಯು ಸಮಾಜದ ಸುಧಾರಣೆಗಾಗಿ ತನ್ನನ್ನು ತಾನು ತೋಡಗಿಸಿಕೊಂಡು ಭಾರತವನ್ನು ಕಾಪಾಡುವ ಸಂಕಲ್ಪ ಮಾಡಬೇಕಾಗಿದೆ . ದೇಶದ ಬೆನ್ನೆಲುಬಾಗಿರುವ ರೈತರು ಸಕಾಲಕ್ಕೆ ಮಳೆಯಾಗದೆ ಇದ್ದರು ಸಹ ಧೃತಿಗೇಡದೆ ದೇಶಕ್ಕೆ ಅನ್ನವನ್ನು ನೀಡುತ್ತಿದ್ದಾನೆ . ಭಾರತದ ಗಡಿಯೂದ್ದಕ್ಕೂ ಉಗ್ರರ ನುಸುಳಿಕೆ ಮತ್ತು ಭಯೋತ್ಪಾದನಾ ಕೃತ್ಯಗಳು ನಿರಂತರ ನಡೆಯುತ್ತಿದ್ದರು ಸಹ ಅವುಗಳನ್ನು ಧೈರ್ಯದಿಂದ ಎದುರಿಸಿ ದೇಶವನ್ನು ಕಾಪಾಡುತ್ತಿರುವ ಭಾರತೀಯ ಸೈನಿಕರನ್ನು ಗೌರವಿಸಿ ಅವರನ್ನು ಹುರಿದುಂಬಿಸುವ ಅವಶ್ಯಕತೆ ಇದೆ ಆ ದೀಸೆಯಲ್ಲಿ ಎಲ್ಲ ಭಾರತೀಯರು ಕಾರ್ಯಪ್ರವೃತ್ತ ವಾಗಬೇಕಾಗಿದೆ ಎಂದು ತಹಶೀಲ್ದಾರ್ ಮಳಗಿ ಹೇಳಿದರು
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಎಸ.ಗುಣಕಿ , ಎ.ಎಸ.ಕರನಿಂಗನ್ನವರ , ಬಿ.ಆರ್.ಕೋಪ್ಪ , ಚುನಿಲಾಲ ಭಾಪನಾ , ಬಾಳಾಗೌಡ ಪಾಟೀಲ ಅವರನ್ನು ತಾಲೂಕಾಡಳಿತದ ಪರವಾಗಿ ಸನ್ಮಾನಿಸಲಾಯಿತು
ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷೆ ಶ್ರೀಮತಿ ಸುನಂದಾ ಕರದೇಸಾಯಿ , ಎಪಿಎಂಸಿ ಅಧ್ಯಕ್ಷ ಅಡಿವೆಪ್ಪಾ ಕಿತ್ತೂರ , ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ , ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜತ್ತಿ , ಎಪಿಎಂಸಿ ನಿರ್ದೇಶಕ ಬಸವರಾ ಸಾಯನ್ನವರ , ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ನಗರಸಭೆ ಸದಸ್ಯರಾದ ಎಸ.ಎ.ಕೋತವಾಲ , ಪರಶುರಾಮ ಭಗತ , ಅಶೋಕ ಪೂಜಾರಿ , ಡಿವಾಯ್ಎಸಪಿ ವೀರಭದ್ರಯ್ಯ , ಸಿಪಿಐ ತವನಪ್ಪಗೋಳ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಶಿಕ್ಷಕ ಎ.ಜಿ.ಕೋಳಿ ನಿರೂಪಿಸಿ ವಂದಿಸಿದರು
ನಂತರ ನಗದರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು