ಬೆಟಗೇರಿ:ಕೊರೋನಾ ಹಿನ್ನೆಲೆ : ಬೆಟಗೇರಿ ಗ್ರಾಮದಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ
ಕೊರೋನಾ ಹಿನ್ನೆಲೆ : ಬೆಟಗೇರಿ ಗ್ರಾಮದಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ
ನಮ್ಮ ಬೆಳಗಾವಿ ಇ – ವಾರ್ತೆ ,ಬೆಟಗೇರಿ ಎ 17 :
ದೇಶಾದ್ಯಂತ ಹರಡಿರುವ ಕರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ.3ರವರೆಗೆ ಲಾಕ್‍ಡೌನ್ ವಿಸ್ತರಣೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ಏ.16 ರಂದು ಒಂದೇ ದಿನ 17 ಜನರಿಗೆ ಕರೊನಾ ವೈರಸ್ ದೃಡಪಟ್ಟಿರುವ ಹಿನ್ನಲೆಯಲ್ಲಿ ಕುಲಗೋಡ ಪೊಲೀಸ್ ಠಾಣೆಯ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ ಗುರುವಾರದಿಂದ ಮತ್ತಷ್ಟು ಬೀಗಿ ಬಂದೂಬಸ್ತ ಕೈಗೊಳ್ಳಲಾಗಿದೆ.
ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಹನಮಂತ ನರಳೆ ಅವರ ಮಾರ್ಗದರ್ಶನದಂತೆ ಸ್ಥಳೀಯ ಬೀಟ್ ಪೊಲೀಸ್ ಪೇದೆ ಬಿ.ಬಿ.ಬಿರಾದಾರ, ನಾಗಪ್ಪ ದುರದುಂಡಿ ಹಾಗೂ ಪೊಲೀಸ್ ಚೆಕ್ ಪೊಸ್ಟ್ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅವರ ಸಹಯೋಗದಲ್ಲಿ ಗ್ರಾಮದಲ್ಲಿ ಕರ್ತವ್ಯ ನಿರತರಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನವಶ್ಯಕ ತಿರಗಾಡುವ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಖಡಕ್ ಸೂಚನೆ, ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಗ್ರಾಮದೆಲ್ಲಡೆ ಕಳೆದೆರಡು ದಿನಗಳಿಂದ ಮತ್ತಷ್ಟು ಸ್ತಬ್ಧ್ ವಾತಾವಾರಣ ಕಾಣುತ್ತಿದೆ. ಪ್ರಮುಖ ಓಣಿ ಬೀದಿ, ಸ್ಥಳಗಳು ಬೀಕೂ ಎನ್ನುತ್ತಿವೆ.
ಗ್ರಾಮದಲ್ಲಿ ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ಆಸ್ಪತ್ರೆ, ಔಷಧ ಮಳಿಗೆಗಳು ಹೊರತುಪಡಿಸಿ, ಅಂಗಡಿ-ಮುಂಗಟ್ಟುಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಬಾಗಿಲು ತೆರೆಯಬೇಕು. ಸ್ಥಳೀಯರು ನಿಗದಿತ ಸಮಯದಲ್ಲಿ ಹೊಲ-ಗದ್ದೆಗಳಿಗೆ ಹೋಗಿ, ಮರಳಿ ಮನೆಗೆ ಬರಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಬಳಿಗಾರ ಹೇಳಿದ್ದಾರೆ.
ಈ ವೇಳೆ ಗ್ರಾಪಂ ಪೊಲೀಸ್ ಪೇದೆ ಬಿ.ಬಿ.ಬಿರಾದಾರ, ಶ್ರೀಧರ ದೇಯಣ್ಣವರ, ಗೌಡಪ್ಪ ಮಾಳೇದ, ಸುರೇಶ ಬಾಣಸಿ, ಪೊಲೀಸ್ ಚೆಕ್ ಪೊಸ್ಟ್ ಸಿಬ್ಬಂದಿಗಳಾದ ಬಿ.ಎ.ಕೋಟಿ, ಎಸ್.ಜಿ.ಮಠಪತಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಸ್ಥಳೀಯರು ಇದ್ದರು.