RNI NO. KARKAN/2006/27779|Saturday, October 19, 2024
You are here: Home » breaking news » ಅಥಣಿ:ಲಾಕಡೌನ ಹಿನ್ನೆಲೆ : ಬಡ ಕುಟುಂಬಗಳಿಗೆ ಆಸರೆಯಾದ ಡಿಸಿಎಂ ಲಕ್ಷ್ಮಣ ಸವದಿ

ಅಥಣಿ:ಲಾಕಡೌನ ಹಿನ್ನೆಲೆ : ಬಡ ಕುಟುಂಬಗಳಿಗೆ ಆಸರೆಯಾದ ಡಿಸಿಎಂ ಲಕ್ಷ್ಮಣ ಸವದಿ 

ಲಾಕಡೌನ ಹಿನ್ನೆಲೆ : ಬಡ ಕುಟುಂಬಗಳಿಗೆ ಆಸರೆಯಾದ ಡಿಸಿಎಂ ಲಕ್ಷ್ಮಣ ಸವದಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಅಥಣಿ  ಎ 18 :  

 

 
ದೇಶಾದ್ಯಂತ ಲಾಕ್ ಡೌನ್ ಮುಂದುವರೆದಿದ್ದು ಇತ್ತ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ  ಡಿಸಿಎಂ, ಲಕ್ಷ್ಮಣ ಸವದಿ ಅವರ ಸೂಚನೆ ಮತ್ತು ಮಾರ್ಗದರ್ಶನದಲ್ಲಿ  ಬಿಪಿಎಲ್ ಹಾಗೂ ಬಡ ಅರ್ಹ ಕುಟುಂಬಗಳಿಗೆ ತಲಾ ಐದು ಕೆಜಿ ಗೋದಿ ಮತ್ತು ಐದು ಕೆಜಿ ಜೋಳವನ್ನು ಉಚಿತವಾಗಿ ಹಂಚುವ ಕಾರ್ಯ ಮುಂದುವರೆದಿದೆ. ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಣೆ ಆದ ಬೆನ್ನಲ್ಲೆ ಕೂಲಿಕಾರ್ಮಿಕರು ಮತ್ತು ಬಡವರು ಕೆಲಸವಿಲ್ಲದೆ ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದೆ ನಿತ್ಯದ ಜೀವನ ನಡೆಸುವದು ಕಷ್ಟವಾಗಿದ್ದು ಅಥಣಿ ಪಟ್ಟಣದ 23 ವಾರ್ಡಗಳಲ್ಲಿ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ವತಿಯಿಂದ ಬಡ ಮತ್ತು ಅರ್ಹ ಕುಟುಂಬಗಳಿಗೆ ಗೋದಿ ಮತ್ತು ಜೋಳವನ್ನು ಉಚಿತವಾಗಿ ಹಂಚಲಾಗುತ್ತಿದೆ.

ಕೊರೋನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಬಡ ಜನರ ಸಹಾಯಕ್ಕೆ ಮುಂದಾದ ಜನನಾಯಕ ಡಿಸಿಎಂ, ಲಕ್ಷ್ಮಣ ಸವದಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಥಣಿ ಪಟ್ಟಣದ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ವತಿಯಿಂದ ಡಿಸಿಎಂ ಲಕ್ಷ್ಮಣ ಸವದಿ ಅವರ ಕುಟುಂಬ ಸದಸ್ಯರು ಮತ್ತು ಸ್ವಯಂ ಸೇವಕರು ಒಟ್ಟು 25 ಸಾವಿರ ಬಡ ಕುಟುಂಬಗಳಿಗೆ ತಲಾ 5 ಕೆಜಿ ಜೋಳ, ಮತ್ತು 5 ಕೆಜಿ ಗೋಧಿ ಧಾನ್ಯಗಳ ಪ್ಯಾಕೇಟ ವಿತರಣೆ ಮಾಡುತ್ತಿದ್ದಾರೆ.ಈ ವೇಳೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಹಾಗೂ ಮಿಲೆನಿಯಮ್ ಸ್ಟಾರ್ಚ್ ಕಂಪನಿಯ ನಿರ್ದೇಶಕ ಶಿವಕುಮಾರ ಸವದಿ ಮಾತನಾಡಿ ಸತ್ಯ ಸಂಗಮ ಗ್ರಾಮ ವಿಕಾಸ ಪ್ರತಿಷ್ಠಾನದ ಮೂಲಕ ಡಿಸಿಎಂ ಲಕ್ಷ್ಮಣ ಸವದಿ ಅವರು ತಮ್ಮ ಕ್ಷೇತ್ರದ ನಿರ್ಗತಿಕರು, ಬಡವರು, ಹಾಗೂ ಬಡ ಕೂಲಿ ಕಾರ್ಮಿಕರು, ಅಲೆಮಾರಿ ಜನಾಂಗದವರ ಅನುಕೂಲಕ್ಕಾಗಿ ಧವಸ ಧಾನ್ಯ ಹಂಚುತ್ತಿದ್ದಾರೆ.ಜನರು ಸಹ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಅವರ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಅವರ ಕುಟುಂಬದವರು ಮತ್ತು ಸ್ವಯಂ ಸೇವಕರು ಆಹಾರ ಧಾನ್ಯಗಳನ್ನು ವಿತರಣೆ ಮಾಡುತ್ತಿದ್ದು. ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ  ಲಾಕ್ ಡೌನ್ ಮುಂದುವರಿದಿದ್ದು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಸಿವಿನಿಂದ ಯಾರು ಸಹ ಉಪವಾಸ ಮಲಗಬಾರದು ಅನ್ನುವ ಉದ್ದೇಶದಿಂದ ಅಥಣಿ ಪಟ್ಟಣದಲ್ಲಿರುವ ಬಡ ಜನರಿಗೆ ಆಹಾರ ದಾನ್ಯಗಳನ್ನು ವಿತರಣೆ ಮಾಡುತ್ತಿರುವದಾಗಿ ಹೇಳಿದರು.

ಇನ್ನು ಒಂದು ವಾರಗಳ ಕಾಲ ಇದೆ ರೀತಿ ಅಥಣಿ ಪಟ್ಟಣ ದಲ್ಲಿರುವ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್, ಮತ್ತು ಅಗತ್ಯ ಇರುವ ಎಲ್ಲ ಬಡ ಕುಟುಂಬಗಳು ಸೇರಿದಂತೆ ಸುಮಾರು 25 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸು ವುದಾಗಿ ಹೇಳಿದರು. 

ಒಟ್ಟಾರೆ ಆಗಿ ಕಳೆದ ಕೆಲವು ತಿಂಗಳ ಹಿಂದೆ ಕೃಷ್ಣಾ ನದಿಗೆ ಪ್ರವಾಹ ಬಂದಾಗಲೂ ತಮ್ಮ ಕ್ಷೇತ್ರದ ಜನರ ಸಂಕಷ್ಟಕ್ಕೆ ಮಿಡಿದು ಜನಸೇವೆಯೆ ಜನಾರ್ದನ ಸೇವೆ ಅಂತ ಮುಂದಾಗಿ ಸಹಾಯ ಹಸ್ತ ಚಾಚಿದ್ದ ಡಿಸಿಎಂ, ಲಕ್ಷ್ಮಣ ಸವದಿ ಅವರ ಈ ಕಾರ್ಯವೂ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಉಳಿದವರಿಗೆ ಮಾದರಿಯಾಗಿದೆ.

ಈ ಸಂಧರ್ಬದಲ್ಲಿ ಚಿದಾನಂದ ಸವದಿ, ಸುಮೀತ ಸವದಿ, ಸುಶೀಲಕುಮಾರ ಪತ್ತಾರ, ಎ ಎಮ್ ಖೊಬ್ರಿ, ಸಂತೋಷ ಸಾವಡಕರ, ವಿಶಾಲ ಸಗರಿ, ಪಂಚಯ್ಯ ಅಳ್ಳಿಮಟ್ಟಿ, ಬಾಹುಬಲಿ ಕಡೋಲಿ, ವಿಕಾಸ ತಾಂಬಟ ಪ್ರದೀಪ ನಂದಗಾಂವ, ಆಶೀಪ ತಾಂಬೋಳಿ, ಶ್ರೀ ಶೈಲ ಲೋಣಾರೆ, ಸಂತೋಷ ಹತ್ತಿ, ವಿಜಯ ಹಿರೆಮಠ, ಪ್ರದೀಪ ಅಂದಾನಿ, ಸಂತೋಶ ಗಸ್ತಿ, ನೀತಿನ್ ಠಕ್ಕನ್ನವರ, ಸಂದೀಪ ಗುಡಗೇರಿ, ಶಿದ್ದು ಹೋನವಾಡಮಠ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Related posts: