RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಾಳೆ ಬೆಳಿಗ್ಗೆ 10.00 ಗಂಟೆಯಿಂದ 4 ದಿನಗಳವರೆಗೆ ಗೋಕಾಕ ತಾಲೂಕ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ

ಗೋಕಾಕ:ನಾಳೆ ಬೆಳಿಗ್ಗೆ 10.00 ಗಂಟೆಯಿಂದ 4 ದಿನಗಳವರೆಗೆ ಗೋಕಾಕ ತಾಲೂಕ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ ಮಾಹಿತಿ 

ನಾಳೆ ಬೆಳಿಗ್ಗೆ 10.00 ಗಂಟೆಯಿಂದ 4 ದಿನಗಳವರೆಗೆ ಗೋಕಾಕ ತಾಲೂಕ ಸಂಪೂರ್ಣ ಲಾಕಡೌನ : ತಹಶೀಲ್ದಾರ ಪ್ರಕಾಶ  ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 19 :

ನಾಳೆ  ದಿ: 20  ರ, ಬೆಳಿಗ್ಗೆ 10.00 ಗಂಟೆಯಿಂದ 23  ರಾತ್ರಿ 12.00 ಗಂಟೆವರೆಗೆ,  4 ದಿನಗಳವರೆಗೆ ಗೋಕಾಕ್ ಸಿಟಿ ಸಹಿತವಾಗಿ ಸಂಪೂರ್ಣ ತಾಲೂಕು ಲಾಕ್ ಡೌನ್ ಮಾಡಲಾಗುವದು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ಈ ನಾಲ್ಕು ದಿನಗಳ ಕಾಲ ಆಸ್ಪತ್ರೆ , ಔಷಧಿ ಅಂಗಡಿ ಮತ್ತು ಹಾಲು ಸೇವೆಗಳು ಮಾತ್ರ ಚಾಲ್ತಿಯಲ್ಲಿ ಇರುತ್ತವೆ.

ಕೊರೋನಾ ವೈರಸ್ ಹರಡದಂತೆ ತಡೆಯಲು ಈ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು‌. ತಾಲೂಕಿನ  ಎಲ್ಲ ನೋಡಲ್ ಅಧಿಕಾರಿಗಳು,  ನಗರಸಭೆ ಪೌರಾಯುಕ್ತರು  ಮತ್ತು ಎಲ್ಲ ಮುಖ್ಯಾಧಿಕಾರಿಗಳು ಸದರಿ ವಿಷಯವನ್ನು ಸಂಭಂದಿಸಿದ  ಕಾರ್ಯಪಡೆಯ ಸದಸ್ಯರ ಹಾಗೂ ಪಿಡಿಓ ಅವರ ಗಮನಕ್ಕೆ ತಂದು, ಇಂದೇ ಡಂಗುರ ಸಾರಿಸಿ, ಗ್ರಾಮಗಳ ಮತ್ತು ನಗರಗಳ  ಬಾರ್ಡರ್ ಗಳನ್ನು ಬಂದ ಮಾಡಿಕೊಂಡು, “ಸಂಪೂರ್ಣ ಲಾಕ್ ಡೌನ್” ನನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಸಾರ್ವಜನಿಕರು ಅನಗತ್ಯವಾಗಿ ತಿರುಗಾಡದೆ, ಲಾಕ್ ಡೌನ್ ಯಶಸ್ವಿಗಾಗಿ ಸಹಕರಿಸಬೇಕು.
         ಜಿಲ್ಲೆಯಲ್ಲಿ ಕೊರೋನಾ ವೈರಸ್  ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು,  ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಲಾಕ್ ಡೌನ್ ನನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ  ಈಗಾಗಲೇ ತಾಲೂಕಿನ ಗ್ರಾಮಗಳಲ್ಲಿ “ಗ್ರಾಮ ಮಟ್ಟದ ಕಾರ್ಯಪಡೆ” ಇರುವಂತೆ, ಗೋಕಾಕ್ ನಗರದಲ್ಲಿಯೂ ಸಹ ಪ್ರತಿ ವಾರ್ಡಿನಲ್ಲಿ,  ವಾರ್ಡ್ ವಾರು , ಆಯಾ ವಾರ್ಡ್ ಸದಸ್ಯರ ಅಧ್ಯಕ್ಷ ತೆಯಲ್ಲಿ 10 ಜನರ ಕಾರ್ಯ ಪಡೆ ರಚಿಸಲಾಗಿದೆ. ಕಾರ್ಯಪಡೆಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು, ಮತಗಟ್ಟೆ ಅಧಿಕಾರಿಗಳು ಅಲ್ಲದೇ ಸ್ಥಳೀಯ ಸ್ವಯಂ ಸೇವಕರು (ಕೊರೋನಾ  ಸೈನಿಕರು) ಇದ್ದು, ಲಾಕ್ ಡೌನ್ ಸಲುವಾಗಿ ಇರುವ ಸರಕಾರದ ಎಲ್ಲ ಆದೇಶಗಳನ್ನು ಸೂಕ್ತ ರೀತಿಯಲ್ಲಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಚಿಸಲ್ಪಟ್ಟ  ಕಾರ್ಯ ಪಡೆಯ ಸದಸ್ಯರಿಗೆ ಸಹಕರಿಸಬೇಕು .  ಸಾರ್ವಜನಿಕರು ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡು  ತಪ್ಪದೇ ಮಾಸ್ಕ್ ಧರಿಸಬೇಕು  ಅನಗತ್ಯವಾಗಿ ಮನೆಯ ಹೊರಗೆ ಬರದೆ ಕೊರೋನಾ ವೈರಸ ಹರಡದಂತೆ ತಡೆಯಲು ಸಹಕರಿಸಬೇಕೆಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ

Related posts: