RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪತ್ರಕರ್ತ ಹಣಮಂತ ಅವರ ಪರಿವಾರದವರಿಗೆ ಪರಿಹಾರ ಧನ ನೀಡಲು ಒತ್ತಾಯಿಸಿ ಗೋಕಾಕ ಪ್ರೆಸ್ ಕ್ಲಬ್ ವತಿಯಿಂದ ಸರಕಾರಕ್ಕೆ ಮನವಿ

ಗೋಕಾಕ:ಪತ್ರಕರ್ತ ಹಣಮಂತ ಅವರ ಪರಿವಾರದವರಿಗೆ ಪರಿಹಾರ ಧನ ನೀಡಲು ಒತ್ತಾಯಿಸಿ ಗೋಕಾಕ ಪ್ರೆಸ್ ಕ್ಲಬ್ ವತಿಯಿಂದ ಸರಕಾರಕ್ಕೆ ಮನವಿ 

ಪತ್ರಕರ್ತ ಹಣಮಂತ ಅವರ ಪರಿವಾರದವರಿಗೆ
ಪರಿಹಾರ ಧನ ನೀಡಲು ಒತ್ತಾಯಿಸಿ ಗೋಕಾಕ ಪ್ರೆಸ್ ಕ್ಲಬ್ ವತಿಯಿಂದ ಸರಕಾರಕ್ಕೆ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 22 :

 

 

 

ಕೊರೊನಾ ವೈರಸ್ ಹರಡುತ್ತಿರುವ ಇಂದಿನ ದಿನಗಳಲ್ಲಿ ಪ್ರಾಣದ ಹಂಗು ತೊರೆದು ವರದಿ ಮಾಡಲು ಹೋದ ರಾಮನಗರದ ಪತ್ರಕರ್ತ ಹಣಮಂತ ಅವರ ಪರಿವಾರದವರಿಗೆ ಕೋವಿಡ್-19 ಯೋಧನೆಂದು ಪರಿಗಣಿಸಿ ಪರಿಹಾರ ಧನ ನೀಡಬೇಕೆಂದು ಸರಕಾರವನ್ನು ಗೋಕಾಕ ಪ್ರೆಸ್ ಕ್ಲಬ್ ಆಗ್ರಹಿಸಿದೆ.
ಬುಧವಾರದಂದು ನಗರದ ಪ್ರೆಸ್ ಕ್ಲಬ್ ಕಾರ್ಯದರ್ಶಿ ಬಿ. ಪ್ರಭಾಕರ ಅವರ ನೇತೃತ್ವದಲ್ಲಿ ಕ್ಲಬ್ ಸದಸ್ಯರು ಗೋಕಾಕ ತಹಶೀಲದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕೊರೋನಾ ವೈರಸ್ ವಿರುದ್ಧ ಇಡೀ ದೇಶದ ಜನತೆ ಹೋರಾಟ ನಡೆಸುತ್ತಿದ್ದಾರೆ. ಅದರಲ್ಲಿ ಪತ್ರಕರ್ತರು ಹೊರತಾಗಿಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರ ಸರಕಾರ ಆರೋಗ್ಯ ಇಲಾಖೆ, ಪೋಲೀಸರು ಮತ್ತು ಪೌರ ಕಾರ್ಮಿಕರನ್ನು ಕೊರೋನಾ ವೈರಸ್ ಯೋಧರೆಂದು ಪರಿಗಣಿಸಿ ಅವರಿಗೆ 50 ಲಕ್ಷ ರೂ. ಪರಿಹಾರ ಘೋಷಿಸಿದೆ. ಅದಕ್ಕಾಗಿ ಪತ್ರಕರ್ತರನ್ನು ಸಹ ಕೊರೋನಾ ವೈರಸ್ ಯೋಧರೆಂದು ಪರಿಗಣಿಸಿ ಮೃತ ಹಣಮಂತ ಅವರ ಕುಟುಂಬಕ್ಕೆ ಪರಿಹಾರಧನ ಮಂಜೂರು ಮಾಡುವಂತೆ ಮನವಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಆರ್.ಎಮ್.ಕಲ್ಯಾಣಶೆಟ್ಟಿ, ಎಸ್.ಬಿ.ಧಾರವಾಡಕರ, ಬಸವರಾಜ ದೇಶನೂರ, ಕಿರಣ ಡಮಾಮಗರ, ಶ್ರೀಕಾಂತ ತಾಶೀಲದಾರ, ಮಲ್ಲಪ್ಪ ದಾಸಪ್ಪಗೋಳ, ಈರಣ್ಣ ಗಣೇಶವಾಡಿ, ಸಾಧಿಕ ಹಲ್ಯಾಳ, ಭೀಮಶಿ ಭರಮಣ್ಣವರ, ಪ್ರದೀಪ ನಾಗನೂರ, ವಸಂತ ಹವಾಲ್ದಾರ ಮೊದಲಾದವರು ಇದ್ದರು.

Related posts: