ಗೋಕಾಕ:ನಾಳೆಯಿಂದ ಬೆಳಿಗ್ಗೆ 7 ಘಂಟೆಯಿಂದ 10 ಘಂಟೆವರೆಗೆ ದಿನಸಿ, ಕಿರಾಣಿ ಮಾರಾಟಕ್ಕೆ ಮುಕ್ತ ಅವಕಾಶ : ಪ್ರಕಾಶ ಹೋಳೆಪ್ಪಗೋಳ
ನಾಳೆಯಿಂದ ಬೆಳಿಗ್ಗೆ 7 ಘಂಟೆಯಿಂದ 10 ಘಂಟೆವರೆಗೆ ದಿನಸಿ, ಕಿರಾಣಿ ಮಾರಾಟಕ್ಕೆ ಮುಕ್ತ ಅವಕಾಶ : ಪ್ರಕಾಶ ಹೋಳೆಪ್ಪಗೋಳ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 23 :
ಲಾಕಡೌನ ಸಂದರ್ಭದಲ್ಲಿ ನಾಳೆಯಿಂದ ಮೊದಲು ಇದ್ದಂತೆ ಬೆಳಿಗ್ಗೆ 7 ಘಂಟೆಯಿಂದ 10 ಘಂಟೆವರೆಗೆ ದಿನಸಿ, ಕಿರಾಣಿ ಅಂಗಡಿಗಳು ಕಾರ್ಯ ನಿರ್ವಹಿಸುತ್ತವೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದರು ಅವರು ಸರಕಾರದ ನಿರ್ದೇಶನದಂತೆ ಮೇ 3 ರವರೆಗೆ ಲಾಕ್ ಡೌನ್ ಮುಂದುವರೆಲಿದೆ. ಹಾಲು, ಕಾಯಿಪಲ್ಲೆ ಮತ್ತು ಹಣ್ಣುಗಳನ್ನು ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅವಕಾಶ ಇರುತ್ತದೆ . ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮತ್ತು ಕೃಷಿ ಯಂತ್ರೋಪಕರಣಗಳು, ಅವುಗಳ ಬಿಡಿ ಭಾಗಗಳ ಮಾರಾಟದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಮಾತ್ರವಲ್ಲ ಮೊಬೈಲ್ ರೀಚಾರ್ಜ್ ಶಾಪ್ ಗಳೂ ಸಹ ಚಾಲ್ತಿಯಲ್ಲಿ ಇರುತ್ತವೆ. ಈ ಎಲ್ಲ ಸೇವೆಗಳು 10.00 ಗಂಟೆವರೆಗು ಮಾತ್ರ ಇರುತ್ತವೆ. ಔಷಧಿ ಅಂಗಡಿ ಮತ್ತು ಆಸ್ಪತ್ರೆಗಳು ಸಹ ಮೊದಲಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ .