ಗೋಕಾಕ:ದಾಯಾದಿ ಕಲಹ : ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕುಂದರಗಿಯಲ್ಲಿ ಘಟನೆ
ದಾಯಾದಿ ಕಲಹ : ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕುಂದರಗಿಯಲ್ಲಿ ಘಟನೆ
ಗೋಕಾಕ ಅ 16 : ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕುಂದರಗಿ ಗ್ರಾಮದ ನಿವಾಸಿ ಜಹಾಂಗಿರಸಾಬ್ ದೇಸಾಯಿ ಎಂಬ ವ್ಯಕ್ತಿಯನ್ನು ಸಂಬಂಧಿಕನಾದ ಮಹಮ್ಮದ್ ದೇಸಾಯಿ ಕೊಲೆ ಮಾಡಿದ್ದಾನೆ. ಕಳೆದ ಹಲವಾರು ವರ್ಷಗಳಿಂದ ಆಸ್ತಿ ವಿವಾದಕ್ಕೆ ಸಂಭಂದಿಸಿದಂತೆ ಆಗಾಗ ಇವರಿಬ್ಬರ ಮಧ್ಯೆ ತಂಟೆ ತಕರಾರುಗಳು ನಡೆಯುತ್ತಿದ್ದವು. ಮಂಗಳವಾರ ರಾತ್ರಿ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಗಲಾಟೆಯಲ್ಲಿ ಕೊಲೆಯಾದ ಜಹಿಂಗೀರಸಾಬನ ಹೆಂಡತಿ ಶೈನಾಜ ಮತ್ತು ಮಗ ಶಮ್ಮಶೋದ್ದಿನ ತೀವ್ರ ಗಾಯಗೊಂಡು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ
ಈ ಸಂಬಂಧ ಅಂಕಲಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.