ಗೋಕಾಕ:ಸಂಕಷ್ಟದದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದು ಪುಣ್ಯದ ಕಾರ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ
ಸಂಕಷ್ಟದದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದು ಪುಣ್ಯದ ಕಾರ್ಯವಾಗಿದೆ : ಡಾ.ರಾಜೇಂದ್ರ ಸಣ್ಣಕ್ಕಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 26 :
ಸಾಕಷ್ಟು ಜನ ಶ್ರೀಮಂತರಿದ್ದರೂ ಕೆಲವರಿಗೆ ದಾನಮಾಡುವ ಪ್ರವೃತ್ತಿ ಇರುವದಿಲ್ಲ, ಅಂಥದರಲ್ಲಿ ಜನರ ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಸ್ವಂತ ಹಣದಲ್ಲಿ ಅರಭಾಂವಿ ಕ್ಷೇತ್ರಾಧ್ಯಂತ ಪ್ರತಿ ಮನೆ-ಮನೆಗಳಿಗೆ ಸಂಕಷ್ಟದ ಸಮಯದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದು ಪುಣ್ಯದ ಕಾರ್ಯವಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಶ್ಲಾಘಿಸಿದರು.
ರವಿವಾರದಂದು ತಾಲೂಕಿನ ಮೆಳವಂಕಿ ಜಿ.ಪಂ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡಮಾಡಿದ ಆಹಾರ ಧಾನ್ಯಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.
ಕಳೆದ 15ವರ್ಷಗಳಿಂದ ಅರಭಾಂವಿ ಕ್ಷೇತ್ರದ ಶಾಸಕರಾಗಿ ಯಾರೂ ಮಾಡದ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಜನರು ಎದುರಿಸುತ್ತಿರುವ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ. ಅದರಲ್ಲೂ ಇಡೀ ವಿಶ್ವವನ್ನೇ ನಡುಗಿಸಿರುವ ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ದಿನಬಳಕೆಯ ದಿನಸಿ ವಸ್ತುಗಳನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸ್ವಂತ ದುಡ್ಡಿನಲ್ಲಿ 76ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಕಿಟ್‍ಗಳನ್ನು ನೀಡುತ್ತಿದ್ದಾರೆ. ಈ ಹಿಂದೆಯೂ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ತತ್ತರಿಸಿರುವ ಜನತೆಯ ಬಾಳಿನ ಜ್ಯೋತಿಯಾಗಿ ಕೆಲಸ ಮಾಡಿರುವುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶೀಲದಾರ ದಿಲ್‍ಶಾದ ಮಹಾತ, ನೂಡಲ್ ಅಧಿಕಾರಿ ಜಿ.ಬಿ.ಬಳಗಾರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಸಿದ್ದಪ್ಪ ಹಂಜಿ, ರಾಮಪ್ಪ ಕಾಪಸಿ, ಅಲ್ಲಪ್ಪ ಕಂಕಣವಾಡಿ, ನ್ಯಾಯವಾದಿ ಬೀರನಗಡ್ಡಿ, ಪಿಡಿಓ ಯಲ್ಲಪ್ಪ ಮೂಡಲಗಿ, ಗ್ರಾ.ಪಂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.