ಘಟಪ್ರಭಾ:ಅರಭಾಂವಿ ಕ್ಷೇತ್ರದ 75 ಸಾವಿರ ಕುಟುಂಬಗಳಿಗೆ ಆಹಾರ ದಾನ್ಯಗಳನ್ನು ನೀಡಿದ ಕಾರ್ಯ ರಾಜ್ಯಕ್ಕೆ ಮಾದರಿ : ಮಾರುತಿ ಮರಡಿ
ಅರಭಾಂವಿ ಕ್ಷೇತ್ರದ 75 ಸಾವಿರ ಕುಟುಂಬಗಳಿಗೆ ಆಹಾರ ದಾನ್ಯಗಳನ್ನು ನೀಡಿದ ಕಾರ್ಯ ರಾಜ್ಯಕ್ಕೆ ಮಾದರಿ : ಮಾರುತಿ ಮರಡಿ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೆ 2 :
ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ 75000 ಕುಟುಂಬಗಳಿಗೆ ಆಹಾರ ದಾನ್ಯಗಳನ್ನು ನೀಡುವ ಮೂಲಕ ಮಹಾನ್ ಅನ್ನ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು “ಶ್ರೇಷ್ಠ ಪಶುಪಾಲಕ” ರಾಜ್ಯ ಪ್ರಶಸ್ತಿ ಪುರಸ್ಕøತರು ಹಾಗೂ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕರಾದ ಮಾರುತಿ ಮರಡಿ ಮೌರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಸಕರಿಂದ ಅರಭಾಂವಿ ಮತ ಕ್ಷೇತದ ಪ್ರತಿ ಕುಂಟುಬಗಳಿಗೆ ಕೊರೋನಾ ವೈರಸ್‍ನಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ಆಹಾರ ದಾನ್ಯಗಳ ಕಿಟ್ಟಗಳನ್ನು ವಿತರಿಸುವ ಕಾರ್ಯ ಸ್ಲಾಘನೀಯವಾಗಿದೆ. ಕ್ಷೇತ್ರದಲ್ಲಿ 34 ಗ್ರಾ.ಪಂ,ಗಳ 77 ಗ್ರಾಮಗಳ ಪ್ರತಿಯೊಂದು ಕುಂಟುಬಗಳಿಗೆ ಬಡವ-ಶ್ರೀಮಂತ ಅನ್ನದೇ ಬೇಧ ಭಾವ ಮಾಡದೇ ಸರ್ವ ಕುಂಟುಬಗಳಿಗೆ ಸ್ವಂತ ವೆಚ್ಚದಲ್ಲಿ ನೀಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ. ಶಾಸಕ ಬಾಲಚಂದ್ರ ಜಾರಕಿಹೋಳಿ ಅವರು ಜನರ ಕಷ್ಟದ ದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಪ್ರತಿ ಹಂತದಲ್ಲೂ ಆಸರೆಯಾಗಿ ಆಪತ್ತಭಾಂದವ ಆಗಿದ್ದಾರೆ. ಇವರಂತ ಜನಾನುರಾಗಿ ಶಾಸಕರನ್ನು ಪಡೆದಿರುವುದು ಕ್ಷೇತ್ರದ ಜನತೆ ಪುಣ್ಯವಂತರು. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ನಾವೆಲ್ಲರೂ ಒಗಟ್ಟಾಗಿ ನಿಂತು ಅದರ ವಿರುದ್ದ ಹೋರಾಡೋಣ. ಇದ್ದಕ್ಕೆ ಹಗಲಿರುಳು ದುಡಿಯುತ್ತಿರುವ ಕೊರೋನಾ ವಾರಿಯರ್ಸನ್ನು ಗೌರವಿಸೋಣ. ಕೊರೋನಾ ಬಂದಾಗಿನಿಂದ ಶಾಸಕರ ಆದೇಶದ ಮೇರೆಗೆ ಪ್ರತಿಯೋದು ಗ್ರಾಮಗಳಿಗೆ ತಾಲೂಕಾಡಳಿತ ಜನರಲ್ಲಿ ಬೇಟಿ ನೀಡಿ ಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿದೆ. ಶಾಸಕರು ಸ್ವಂತ ತಾವೇ 2.50 ಲಕ್ಷ ಮಾಸ್ಕಗಳನ್ನು ನೀಡಿದ್ದಾರೆ. ನಗರ ಪ್ರದೇಶಗಳಲ್ಲಿರುವ ಸ್ಲಂ ಪ್ರದೇಶದ ಬಡ ಕುಟುಂಬಗಳಿಗೆ ಪ್ರತಿದಿನ ಒಂದು ಲೀಟರನಂತೆ ಉಚಿತವಾಗಿ ನಂದಿನಿ ಹಾಲು ವಿತರಿಸುತ್ತಿರುವದನ್ನು ಗಮನಿಸಿದರೆ ಅವರ ಜನಪರ ಕಾಳಜಿಯನ್ನು ತೋರಿಸುತ್ತಿದೆ. ಇಂತಹ ಕಷ್ಟದ ಸಮಯದಲ್ಲಿ ನಮಗಾಗಿ ಹೋರಾಡುತ್ತಿರುವ ಶಾಸಕರೊಂದಿಗೆ ನಾವು ಕೈಜೋಡಿಸಿ ಕೊರೋನಾ ವೈರಸ್ನ್ನು ಸೋಲಿಸೋನಾ ಎಂದು ಮಾರುತಿ ಮರಡಿ ಮೌರ್ಯ ಕರೆ ನೀಡಿದ್ದಾರೆ.