ಗೋಕಾಕ:ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅನ್ನದಾನ
ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅನ್ನದಾನ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 2 :
ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಪೊಲೀಸ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಶ್ರೇಷ್ಠವಾದ ಅನ್ನದಾನ ಮಾಡುವ ಮಹತ್ತರವಾದ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯ್ಕ ಹೇಳಿದರು.
ಅವರು, ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದವರು ಶನಿವಾರದಂದು ವೈದ್ಯಕೀಯ ಮಧ್ಯಾಹ್ನದ ಉಪಹಾರ, ಹಣ್ಣು ಹಂಪಲು ಹಾಗೂ ಮಜ್ಜಿಗೆ ವಿತರಿಸಿ, ಮಾತನಾಡಿದರು.
ಲಾಕ್ ಡೌನ್ ಎರಡನೇ ಹಂತದಿಂದ ಸತತವಾಗಿ ವಿವಿಧ ಇಲಾಖೆಗಳ ಸಿಬ್ಬಂಧಿಗಳಿಗೆ ಉಪಹಾರ ಸೇವೆ ಸಲ್ಲಿಸುತ್ತಿರುವದು ಎಲ್ಲರಿಗೂ ಮಾದರಿ ಕಾರ್ಯ ಎಂದರು. ಮಹಾಮಾರಿ ಕರೋನಾ ಸೋಂಕಿನೊಂದಿಗೆ ಹೋರಾಟ ನಡೆಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂಧಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಶಹರ ಠಾಣೆ ಪಿಎಸ್‍ಐ ಅಮ್ಮಿನಭಾಂವಿ, ತಾಲೂಕ ವೈದ್ಯಾಧಿಕಾರಿ ರವೀಂದ್ರ ಅಂಟಿನ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಸತೀಶ ಮಾಳಗೆನ್ನವರ, ಮುಖಂಡರಾದ ಭೀಮಶಿ ಭರಮನ್ನವರ, ಮುತ್ತುರಾಜ ಜಮಖಂಡಿ, ಅಡಿವೇಶ ಮಜ್ಜಗಿ, ಪ್ರದೀಪ ನಾಗನೂರ, ಗೋಪಾಲ ಕಲ್ಲೋಳ್ಳಿ ಸೇರಿದಂತೆ ಅನೇಕರು ಇದ್ದರು.