ಗೋಕಾಕ:ವೈದ್ಯಕೀಯ, ಪೋಲಿಸ್ ಇಲಾಖೆಯ ಹಾಗೂ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ : ಜಿ.ಬಿ.ಬಳಗಾರ
ವೈದ್ಯಕೀಯ, ಪೋಲಿಸ್ ಇಲಾಖೆಯ ಹಾಗೂ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ : ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 3 :
ಕರೋನಾ ಮಹಾಮಾರಿಯಿಂದ ದೇಶದ ರಕ್ಷಣೆ ಮಾಡುವಲ್ಲಿ ವೈದ್ಯಕೀಯ ಇಲಾಖೆ, ಪೋಲಿಸ್ ಇಲಾಖೆಯ ಹಾಗೂ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.
ನಗರದ ಕಾರ್ಯನಿರತ ಪೆÇಲೀಸ, ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಅಂಬಿರಾವ ಪಾಟೀಲ ಅಭಿಮಾನಿಗಳ ಬಳಗದಿಂದ ಆಯೋಜಿಸಿದ್ಧ ಉಪಹಾರ, ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಥಳೀಯ ಪೆÇೀಲಿಸ್ ಇಲಾಖೆ, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂಧಿಗಳು ತಮ್ಮ ಕುಟುಂಬಗಳನ್ನು ತೊರೆದು ನಮ್ಮ ಆರೋಗ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಹೀಗಾಗಿ ನಾವೆಲ್ಲರೂ ನಮ್ಮ ಮನೆಗಳಲ್ಲಿಯೇ ಇದ್ದು ಸರಕಾರ ಆದೇಶ ಪಾಲನೆ ಮಾಡುವ ಮೂಲಕ ಕರೋನಾ ಸೋಂಕನ್ನು ತಡೆಗಟ್ಟೋಣ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವ್ಯವಹಿರಿಸೋಣ ಎಂದರು.
ಈ ಸಂದರ್ಭದಲ್ಲಿ ಆರ್‍ಎಫ್‍ಓ ಕೆ ಎಮ್ ವಣ್ಣೂರ, ಸಮಾಜ ಸೇವಕ ಹನಮಂತ ದುರ್ಗನ್ನವರ, ಭೀಮಶಿ ಭರಮನ್ನವರ, ಅಡಿವೇಶ ಮಜ್ಜಗಿ, ರವಿ ಹನಿಮನಾಳ, ಮುತ್ತು ಜಮಖಂಡಿ, ರಾಜು ಹಿರೆಅಂಬಿಗೇರ, ಪ್ರದೀಪ ನಾಗನೂರ, ಸತೀಶ ಮನ್ನಿಕೇರಿ ಸೇರಿದಂತೆ ಅನೇಕರು ಇದ್ದರು.