ಗೋಕಾಕ:ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ ಅಹಮದ : ಡಾ.ಸಿ.ಕೆ ನಾವಲಗಿ
ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ ಅಹಮದ : ಡಾ.ಸಿ.ಕೆ ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 4 :
ಕನ್ನಡ ಕಾವ್ಯ ಲೋಕಕ್ಕೆ ನಿತ್ಯೋತ್ಸವದ ರಂಗು ತುಂಬಿದ ಕವಿ ನಿಸಾರ ಅಹಮದ ಅವರ ಅಗಲಿಕೆಯಿಂದ ಸಾಹಿತ್ಯಲೋಕ ಬಡವಾಗಿದೆ ಎಂದು ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ ಹೇಳಿದರು
ಸೋಮವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ವತಿಯಿಂದ ದಿ.ನಿಸಾರ ಅಹಮದ್ ಅವರ ಶ್ರದ್ದಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿ ಅವರು ಮಾತನಾಡಿದರು
ಕನ್ನಡ ನಾಡು ನುಡಿಗೆ ನಿಸ್ಸಾರ್ ಅಹಮದ್ ಅವರ ಕೊಡುಗೆ ಅಪಾರ. ಅವರ ನಿತ್ಯೋತ್ಸವ ಕವನ ಇಂದಿಗೂ ಜನಜನಿತ. ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲಿ, ಎಂಬ ಹಾಡು ಕನ್ನಡ ನಾಡಿನ ಸೌಂದರ್ಯವನ್ನು ತನ್ನೊಳಗೆ ಹುದುಗಿಸಿ ಇಟ್ಟುಕೊಂಡಿದೆ ಎನ್ನುವಂತೆ ಕೇಳುಗನ ಮನ ರಂಜಿಸುತ್ತದೆ. ಇಂತಹ ಅಮೋಘ ಸಾಹಿತ್ಯಗಳೆಷ್ಟೋ ನೀಡಿದ ಈ ಕವಿಪುಂಗವನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡೋಣ ಎಂದರು
ಸಭೆಯ ಅಧ್ಯಕ್ಷತೆಯನ್ನು ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ವಹಿಸಿ ಮಾತನಾಡಿದರು.
ನಗರದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು
ಕಾರ್ಯದರ್ಶಿ ಸಾದಿಕ ಹಲ್ಯಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು