ಗೋಕಾಕ :40 ದಿನಗಳ ಲಾಕಡೌನ ನಂತರ ಸಹಜ ಸ್ಥಿತಿಗೆ ಮರಳಿದ ಕರದಂಟು ನಗರಿ ಗೋಕಾಕ
40 ದಿನಗಳ ಲಾಕಡೌನ ನಂತರ ಸಹಜ ಸ್ಥಿತಿಗೆ ಮರಳಿದ ಕರದಂಟು ನಗರಿ ಗೋಕಾಕ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 5 :
ಕೊರೋನಾ ಮಹಾಮಾರಿ ತಡೆಗಟ್ಟಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದ 2 ಹಂತದ ಲಾಕಡೌನ ಕರದಂಟು ನಾಡಿನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಳಗಾವಿ ಜಿಲ್ಲೆ ಕಿತ್ತಳೆ ವಲಯ ಎಂದು ಘೋಷಣೆಯಾದ ಪ್ರಯುಕ್ತ ಸೋಮವಾರದಿಂದ ಕರದಂಟು ನಗರ ಗೋಕಾಕ ಸಹಜ ಸ್ಥಿತಿಗೆ ಮರಳಿದೆ.
ಎಂದಿನಂತೆ ಮುಂಜಾನೆ ಬಸವೇಶ್ವರ ವೃತ್ತದಲ್ಲಿ ಅಂಗಡಿಗಳು ತೆರೆದಿದ್ದವು. ಆಟೋ ಎಂದಿನಂತೆ ರಸ್ತೆಗಿಳಿದಿವೆ
ಕಳೆದ 40 ದಿನಗಳ ಲಾಕಡೌನ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ಮಾತ್ರ ದೊರೆಯುತ್ತಿದ್ದವು ಆದರೆ ಸೋಮವಾರದಿಂದ ಎಟಿಎಂ ಕೇಂದ್ರಗಳು, ಔಷಧಿ ಅಂಗಡಿಗಳು, ಬೇಕರಿ, ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಹೂವು, ಸೊಪ್ಪು,ದಿನಸಿ, ತರಕಾರಿ, ಕಟಿಂಗ್ ಶಾಪ್ ಗಳು , ಮಾಂಸದಂಗಡಿಗಳ ವ್ಯಾಪಾರಿಗಳು ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿವೆ
ಮಾರುಕಟ್ಟೆ ಇನ್ನಿತರ ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ತೆರೆದಿರುವ ಕಾರಣ ನಗರದ ಕೆಲವು ಕಡೆ ಜನಸಂಚಾರ ಹೆಚ್ಚಾಗಿತ್ತು. ಬೆಳಗಿನ ಜಾವದಲ್ಲಿಯೇ ರೈತರು ಬೆಳೆದ ಸೊಪ್ಪು ತರಕಾರಿಯನ್ನು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಪೊಲೀಸರು ಮತ್ತು ನಗರ ಸಭೆಯ ಸಿಬ್ಬಂದಿ ಕೊರೊನಾ ವೈರಸ್ ಹರಡದಂತೆ ತಾಲೂಕಾಡಳಿತ ಈಗಾಗಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವಜನಿಕರು ಸಹಕರಿಸಬೇಕಾಗಿದೆ .
ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ ಭಣಗುಡುತ್ತಿತ್ತು. ಉಳಿದಂತೆ ಆಟೋ ಸೇವೆ ಎಂದಿನಂತೆ ಓಡಾಟ ನಡೆಸಿವೆ ಸರ್ಕಾರಿ ಕಚೇರಿಗಳು, ಬ್ಯಾಂಕ್, ಬೆರಳೆಣಿಕೆಯಷ್ಟು ಆಸ್ಪತ್ರೆ ಸೇರಿದಂತೆ ಇನ್ನಿತರ ಸೇವೆಗಳು ನಗರದಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ನಗರಾದಂತ್ಯ ಪೊಲೀಸರು ಗಸ್ತು ತಿರುಗುತ್ತಾ ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸುವಂತೆ ಜಾಗೃತಿ ಮೂಡಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ .
ದೇಶಾದ್ಯಂತ ಮೆ 17 ರವರೆಗೆ 3 ಹಂತದ ಲಾಕಡೌನ ಜಾರಿಯಲ್ಲಿದೆ . ಕೊರೋನಾ ವೈರಸ ಇಲ್ಲದ ದೇಶದ ಹಲವು ಕಡೆ ಕೆಲವಂದು ಮಾನದಂಡಗಳನ್ನು ಹೇರಿ ಲಾಕಡೌನ ಸಡಿಲಗೋಳಿಸಿಲಾಗಿರುವ ಪರಿಣಾಮ ಸರಕು ಸಾಗಾಣಿಕೆ ಹಾಗೂ ವ್ಯಾಪಾರ ವಹಿವಾಟು ಎಂದಿನಂತೆ ನಡೆದಿವೆ