ಗೋಕಾಕ:ಬೆಳಗಾವಿ ಹಾಲು ಒಕ್ಕೂಟ ರೈತ ಕಲ್ಯಾಣ ಸಂಘದಿಂದ ಪರಹಾರದ ಧನದ ಚೆಕ್ ವಿತರಣೆ
ಬೆಳಗಾವಿ ಹಾಲು ಒಕ್ಕೂಟ ರೈತ ಕಲ್ಯಾಣ ಸಂಘದಿಂದ ಪರಹಾರದ ಧನದ ಚೆಕ್ ವಿತರಣೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೆ 5 :
ಬೆಳಗಾವಿ ಹಾಲು ಒಕ್ಕೂಟ ರೈತ ಕಲ್ಯಾಣ ಸಂಘದಿಂದ ತಾಲೂಕಿನ ಶಿಂಧಿಕುರಬೇಟ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೃತ ಇಬ್ಬರು ಸದಸ್ಯರ ವಾರಸುದಾರರಿಗೆ ತಲಾ 10 ಸಾವಿರ ರೂಗಳ ಪರಹಾರದ ಧನದ ಚೆಕ್ ಗಳನ್ನು ಮಂಗಳವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ವಿತರಿಸಿದರು
ಇತ್ತಿಚೆಗೆ ಶಿಂಧಿಕುರಬೇಟ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಗುರುಪುತ್ರ ನೇರಲಿ , ದುಂಡಪ್ಪ ಹೋಸಪೇಟಿ ಮೃತರಾದ ಹಿನ್ನೆಲೆಯಲ್ಲಿ ಈ ಪರಿಹಾರ ಧನದ ಚೆಕಗಳನ್ನು ವಿತರಿಸಲಾಯಿತು