RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ದಾದಿಯರು ಮಾಡುತ್ತಿರುವ ಸೇವೆ ಶ್ಲಾಘನೀಯ : ಬಸವರಾಜ ಖಾನಪ್ಪನವರ

ಗೋಕಾಕ:ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ದಾದಿಯರು ಮಾಡುತ್ತಿರುವ ಸೇವೆ ಶ್ಲಾಘನೀಯ : ಬಸವರಾಜ ಖಾನಪ್ಪನವರ 

ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ದಾದಿಯರು ಮಾಡುತ್ತಿರುವ ಸೇವೆ ಶ್ಲಾಘನೀಯ : ಬಸವರಾಜ ಖಾನಪ್ಪನವರ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 12 :

 

 

 

ಕೊರೋನಾ ತುರ್ತು ಪರಿಸ್ಥಿತಿಯಲ್ಲಿ ದಾದಿಯರು ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ವಿಶ್ವ ದಾದಿಯರ ದಿನಾಚರಣೆ ನಿಮಿತ್ತ ಕರವೇ ತಾಲೂಕಾ ಘಟಕದ ವತಿಯಿಂದ ಮಂಗಳವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ದಾದಿಯರಿಗೆ ಪುಪ್ಪವೃಷ್ಠಿ ಹಾಗೂ ತಂಪು ಪಾನೀಯಾ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ಮಹಾಮಾರಿ ಕೊರೋನಾ ವೈರಸ್ ದಿಂದ ಇಡೀ ದೇಶ ಸ್ತಬ್ದವಾದರು ಸಹ ದಾದಿಯರು , ವೈದ್ಯರು ಹಾಗೂ ಆಶಾ ಕಾರ್ಯಕರ್ತರು ತಮ್ಮ ಆಸೆ ಅಭಿಲಾಷೆಗಳನ್ನು ತ್ಯಾಗ ಮಾಡಿ ರೋಗಿಗಳ ರಕ್ಷಣೆಯಲ್ಲಿ ತೊಡಗಿ ಮಾನವಿಯತೆ ಮೆರೆಯುತ್ತಿದ್ದಾರೆ ಇವರ ಈ ಶ್ಲಾಘಿನೀಯ ಸೇವೆಯನ್ನು ಪರಿಗಣಿಸಿ ಸರಕಾರ ಇವರಿಗೆ ಸೂಕ್ತ ಸೌಲಭ್ಯಗಳನ್ನು ನೀಡಿ ಇವರ ಕಾರ್ಯವನ್ನು ಗೌರವಿಸಿ ಇವರಿಗೆ ಆತ್ಮಸ್ಥೈರ್ಯವನ್ನು ತುಂಬಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ‌. ರವೀಂದ್ರ ಅಂಟಿನ , ಕೃಷ್ಣಾ ಖಾನಪ್ಪನವರ ,ದಾದಿಯರುಗಳಾದ ಭಾರತಿ ಕೋಳಿ, ಮಹಾದೇವಿ ಗಡಕರಿ , ದೀಪಾ ತುಬಾಕಿ , ರೇಣುಕಾ , ತನು , ಮಹಾದೇವಿ ಬಾಂದರವಾಡಿ , ಮಲ್ಲೇಶ ಆಡಿನ, ಪ್ರವಿಣ ಹುಳ್ಳೋಳಿ , ಗುರುಸಿದ್ದ ಡಂಗೆನ್ನವರ, ಪ್ರವಿಣ ವಾಳವಿ , ಕರವೇಯ ಶ್ರೀಮತಿ ಲಕ್ಷ್ಮೀಬಾಯಿ ನಾಗನೂರ , ಶ್ರೀಮತಿ ಶಾಮಲಾ ಹುಬ್ಬಳಿಕರ , ಶ್ರೀಮತಿ ವಿದ್ಯಾ ದಾಬಿಮಠ , ಶ್ರೀಮತಿ ಗೌರವ್ವ ಎನ್.ಕೆ , ಕಿರಣ ವಾಲಿ , ಮಂಜು ಪ್ರಭುನಟ್ಟಿ, ರಾಜು ಕೆಂಚಣಗುಡ್ಡ , ಮಹಾಂತೇಶ ಹಿರೇಮಠ, ಪ್ರತೀಕ ಪಾಟೀಲ , ಸತಾರ ಬೆಪಾರಿ , ಮುಗುಟ ಪೈಲವಾನ , ಸುರೇಶ ಪತ್ತಾರ , ಮಲ್ಲು ಗುಂಡಕಲ್ಲಿ ಸೇರಿದಂತೆ ಇತರರು ಇದ್ದರು

Related posts: