ಮೂಡಲಗಿ:“ಮಂದಿಯ ಕಷ್ಟ ನೋಡ್ಯಾರ,ಎನ್ ಚಂದ ಸಂತಿ ಮಾಡ್ಯಾರ” ಜಾನಪದ ಹಾಡಿನ ವಿಡಿಯೊ ಸಿ.ಡಿ.ಬಿಡುಗಡೆ
“ಮಂದಿಯ ಕಷ್ಟ ನೋಡ್ಯಾರ,ಎನ್ ಚಂದ ಸಂತಿ ಮಾಡ್ಯಾರ” ಜಾನಪದ ಹಾಡಿನ ವಿಡಿಯೊ ಸಿ.ಡಿ.ಬಿಡುಗಡೆ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಮೇ 12 :
ಅರಬಾಂವಿ ಕ್ಷೇತ್ರದ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ 86ಸಾವಿರ ಅಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಕ್ಷೇತ್ರದ ಅನ್ನದಾತರಾಗಿದ್ದಾರೆ ಎಂದು ಹಳ್ಳೂರ ಜಿ.ಪಂ.ಸದಸ್ಯೆ ವಾಸಂತಿ ತೇರದಾಳ ಹೇಳಿದರು.
ಸೋಮವಾರ ಸಾಯಂಕಾಲ ಹಳ್ಳೂರ ಗ್ರಾಮದ ತಮ್ಮ ನಿವಾಸದಲ್ಲಿ ಜಾಣಪದ ಜಾಣ ಶಬ್ಬೀರ ಡಾಂಗೆ ರಚಿಸಿ ಹಾಡಿದ “ಮಂದಿಯ ಕಷ್ಟ ನೋಡ್ಯಾರ,ಎನ್ ಚಂದ ಸಂತಿ ಮಾಡ್ಯಾರ” ಎಂಬ ಜಾನಪದ ಹಾಡಿನ ವಿಡಿಯೊ ಸಿ.ಡಿ.ಬಿಡುಗಡೆಯ ಸರಳ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ,ಕಳೆದ 15-16ವರ್ಷಗಳಿಂದ ಕಷ್ಟದಲ್ಲಿದ್ದ ಕ್ಷೇತ್ರದ ಜನತೆಗೆ ಸಹಾಯ ಹಸ್ತ ನೀಡುತ್ತಿದ್ದಾರೆ.ಕೊರೋನಾ ಲಾಕ್‍ಡೌನ ಸಮಯದಲ್ಲಿ ಉದ್ಯೋಗವಿಲ್ಲದೆ ಜನತೆ ಹಸಿವಿನಿಂದ ಇರಬಾರದು ಎಂದು ಪಕ್ಷಬೇದ,ಜಾತಿಬೇದ ಮಾಡದೆ ಕ್ಷೇತ್ರದ ಪ್ರತಿ ಕುಟುಂಬಗಳಿಗೆ ಅಹಾರ ದಾನ್ಯ ವಿತರಿಸಿ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದಾರೆ.ಅವರ ಜನಹಿತ ಕಾರ್ಯಗಳ ಕುರಿತಾದ ಹಾಡಿದ ಹಾಡು ಎಲ್ಲರೂ ಮೆಚ್ಚುವಂತಾಗಿದೆ ಎಂದರು.
ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಹಳ್ಳೂರ ಪಿ.ಕೆ.ಪಿ.ಎಸ್.ಮಾಜಿ ಅದ್ಯಕ್ಷ ಹಾಲಿ ನಿರ್ದೇಶಕ ಹಣಮಂತ ತೇರದಾಳ ಅವರ ಪ್ರಾಯೋಜಿತ ಶಾಸಕರ ಕುರಿತಾದ ಹಾಡಿದ ವಿಡಿಯೋ ಸಿ.ಡಿ.ಯಲ್ಲಿ ಜನತೆಗೆ ಹಂಚಿದ ಅಹಾರ ಕಿಟ್ಟ್,ಮಾಸ್ಕ ಮತ್ತು ಕೆ.ಎಮ್.ಎಫ್ ಹಾಲನ್ನು ರಾಜ್ಯದ ಜನತೆಗೆ ವಿತರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿ ವಿಡಿಯೋ ಹಾಡಿಗೆ ಶ್ರಮಿಸಿದ ತಂಡಕ್ಕೆ ಶುಭ ಕೋರಿದರು.
ಅದ್ಯಕ್ಷತೆ ವಹಿಸಿದ್ದ ಹಳ್ಳೂರ ಗ್ರಾ.ಪಂ. ಮಾಜಿ ಅದ್ಯಕ್ಷ ಬಿ.ಜಿ. ಸಂತಿ ಹಳ್ಳೂರ ಗ್ರಾಮಕ್ಕೆ ಒದಗಿಸಿದ ಸೌಕರ್ಯಗಳ ಬಗ್ಗೆ ಹೇಳಿದರು.