RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಗೋಕಾಕ:ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ 

ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 13 :

 

 

 

 

ಗೋಕಾಕ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು 11.30 ಕೋಟಿ ರೂಗಳ ವೆಚ್ಚದಲ್ಲಿ 650 ಹೆಕ್ಟೇರ ಜಮೀನುಗಳಲ್ಲಿ ನೀರಿವಾರಿ ಸೌಲಭ್ಯ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹಳ್ಳಗಳಿಗೆ ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸತತ ಪ್ರಯತ್ನದಿಂದ ಅನುಷ್ಠಾನಗೊಳಿಸಿದ್ದಾರೆಂದು ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ ಹೇಳಿದರು.
ಅವರು, ಬುಧವಾರದಂದು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ಹಳ್ಳಗಳಿಗೆ ಬ್ರೀಡ್ಜ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬೂದಿಹಾಳ 2ಕೋಟಿ, ದುಂಡಾನಟ್ಟಿ 2ಕೋಟಿ, ಜಮನಾಳ 1.80 ಲಕ್ಷ, ಮಕ್ಕಳಗೇರಿ 1.50 ಲಕ್ಷ, ಮಲಾಮರಡಿ 2ಕೋಟಿ, ಮಮದಾಪೂರ 1.50 ಲಕ್ಷ, ಪಂಚನಾಯ್ಕನಹಟ್ಟಿ 2ಕೋಟಿ, ಉಪ್ಪಾರಹಟ್ಟಿ-1 2ಕೋಟಿ ಮತ್ತು ಉಪ್ಪಾರಹಟ್ಟಿ-2 2ಕೋಟಿ, ಯದ್ದಲಗುಡ್ಡ 1.50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸುಮಾರು 650 ಹೆಕ್ಟೇರ ಜಮೀನುಗಳಲ್ಲಿ ನೀರಿವಾರಿ ಸೌಲಭ್ಯ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಮಾಗಾರಿ ಕೈಗೊಂಡಿದ್ದಾರೆ ಎಂದರು
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಹನಮಂತ ದುರ್ಗನ್ನವರ, ವೈ ವೈ ಬೂದಿಗೊಪ್ಪ, ಹನಮಂತ ಕಿಚಡಿ, ಮಹಾದೇವ ಬಂಡಿ, ಸಿದ್ದಪ್ಪ ಬೂದಿಗೊಪ್ಪ, ಪ್ರಕಾಶ ಪಾಟೀಲ, ಕರೆಪ್ಪ ಕೊಳವಿ, ಬಸಪ್ಪ ಹೊನಕುಪ್ಪಿ, ಯಮನಪ್ಪ ಬನಾಜ, ರಂಗಪ್ಪ ನಂದಿ, ಲಕ್ಷ್ಮಣ ಆಡಿನ, ರಮೇಶ ತಿಗಡಿ, ಹನಮಂತ ಕಡಕೋಳ, ಮಹಾದೇವ ಚೂನನ್ನವರ, ಬಾಳಯ್ಯ ವಗ್ಗನವರ, ಮಾಯಪ್ಪ ಮೆಳವಂಕಿ, ಗಿರೇಪ್ಪ ಬಂಡಿ ಸೇರಿದಂತೆ ಗ್ರಾಮಸ್ಥರು ಇದ್ದರು.

Related posts: