ಗೋಕಾಕ:ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ
ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 15 :
ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಅವರು ದಿ.15 ರಿಂದ 19 ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸಕೈಗೊಳ್ಳಲಿದ್ದಾರೆ.
ದಿ.15 ಶುಕ್ರವಾರದಂದು ಬೆಳಿಗ್ಗೆ 9ಗಂ ಬೆಂಗಳೂರು ರಸ್ತೆ ಮೂಲಕ ಮಧ್ಯಾಹ್ನ ಗೋಕಾಕ ಆಗಮಿಸಿ ಗೋಕಾಕನಲ್ಲಿ ವಾಸ್ತವ್ಯ. ದಿ. 16 ಶನಿವಾರದಂದು ಬೆಳಿಗ್ಗೆ 9 ಗಂಟೆಗೆ ತಮ್ಮ ಗೃಹ ಕಛೇರಿಯಲ್ಲಿ ಕೊವಿಡ್ -19 ಕ್ಕೆ ಸಂಭಂದ ಪಟ್ಟಂತೆ ಕ್ಷೇತ್ರದ ಸಾರ್ವಜನಿಕರೊಂದಿಗೆ ಜಾಗೃತಿ ಸಭೆ ನಡೆಯಿಸಿ ಗೊಕಾಕದಲ್ಲಿ ವಾಸ್ತವ್ಯ ಮಾಡುವರು .
ದಿ. 17 ರವಿವಾರದಂದು ಬೆಳಿಗ್ಗೆ 9 ಗಂಟೆಗೆ ತಮ್ಮ ಗೃಹ ಕಛೇರಿಯಲ್ಲಿ ಕೊವಿಡ್ -19 ಕ್ಕೆ ಸಂಭಂದ ಪಟ್ಟಂತೆ ಕ್ಷೇತ್ರದ ಸಾರ್ವಜನಿಕರೊಂದಿಗೆ ಜಾಗೃತಿ ಸಭೆ ನಡೆಯಿಸಿ ಗೊಕಾಕದಲ್ಲಿ ವಾಸ್ತವ್ಯ ಮಾಡುವರು
ದಿ. 18 ಸೋಮವಾರದಂದು ಬೆಳಿಗ್ಗೆ 9.30 ಗಂಟೆಗೆ ಗೋಕಾಕದಿಂದ ನಿರ್ಗಮಿಸಿ ಬೆಳಗಾವಿಯ ಉತ್ತರ ವಲಯದ ಮುಖ್ಯ ಅಭಿಯಂತರರ ಕಛೇರಿಯಲ್ಲಿ 11:00 ಗಂಟೆಗೆ ಗಟ್ಟಿ ಬಸವಣ್ಣ ಕುಡಿಯುವ ನೀರು ಮತ್ತು ಜಲ ವಿದ್ಯುತ್ ಯೋಜನೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು . ದಿ.19 ಮಂಗಳವಾರದಂದು ಬೆಳಿಗ್ಗೆ 9 ಗಂಟೆಗೆ ಗೋಕಾಕದಿಂದ ನಿರ್ಗಮಿಸಿ 10 ಗಂಟೆಗೆ ಸವದತ್ತಿಯ ನವಿಲ ತೀರ್ಥ ಜಲಾಶಯದ ಅತಿಥಿ ಗೃಹದಲ್ಲಿ ಮಲ್ಲಪ್ರಭಾ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಮಧ್ಯಾಹ್ನ 3 ಗಂಟೆಗೆ ಅಲ್ಲಿಂದ ನಿರ್ಗಮಿಸುವರು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಮಾರಂಗಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ