RNI NO. KARKAN/2006/27779|Friday, December 13, 2024
You are here: Home » breaking news » ಘಟಪ್ರಭಾ:24 ಲಕ್ಷ ರೂ.ಗಳ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಗೆ ಚಾಲನೆ

ಘಟಪ್ರಭಾ:24 ಲಕ್ಷ ರೂ.ಗಳ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಗೆ ಚಾಲನೆ 

24 ಲಕ್ಷ ರೂ.ಗಳ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಗೆ ಚಾಲನೆ

 

 
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮೇ 16 :

 

 

ಸ್ಥಳೀಯ ಜೆ.ಜಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಅಂದಾಜು 24 ಲಕ್ಷ ರೂ.ಗಳ ವೆಚ್ಚದಲ್ಲಿ ನೀರು ಸರಬರಾಜು ಯೋಜನೆಗೆ ಶನಿವಾರದಂದು ಚಾಲನೆ ನೀಡಲಾಯಿತು.
ಆಸ್ಪತ್ರೆಗೆ ಕುಡಿಯುವ ನೀರಿನ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಯಿಂದ ಶಿರಢಾಣ ಗ್ರಾಮದ ಮೂಲಕ ಜೆ.ಜಿ ಆಸ್ಪತ್ರೆ ವರೆಗೆ ಒಟ್ಟು ಮೂರು ಕಿ.ಮಿ ಆರು ಇಂಚಿನ ಪೈಪ ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಂಸ್ಥೆ ಆಸ್ಪತ್ರೆ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಶುದ್ಧ ಕುಡಿಯುವ ನೀರಿನ ಅನುಕೂಲವಾಗಲಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಿ.ಆರ್.ಪಾಟೀಲ(ನಾಗನೂರ), ಉಪಾಧ್ಯಕ್ಷ ಎ.ಎನ್.ಕರಲಿಂಗನವರ, ನಿರ್ದೇಶಕರಾದ ಅಪ್ಪಯಪ್ಪಾ ಬಡಕುಂದ್ರಿ, ಚಂದ್ರಶೇಖರ ಕಾಡದವರ, ಸುರೇಶ ಕಾಡದವರ, ಆರ್.ಟಿ.ಶಿರಾಳಕರ, ಶಿವನಗೌಡಾ ಪಾಟೀಲ, ಎಸ್.ಎಂ.ಚಂದರಗಿ, ಬಿ.ಎಂ.ಬಂಡಿ, ಎಸ್.ಎಸ್.ದಳವಾಯಿ, ಆರ್.ಜೆ.ಪತ್ತಾರ, ಆಶಾದೇವಿ ಕತ್ತಿ, ಪೂಜಾ ಇನಾಮದಾರ, ಮ್ಯಾನೇಜರ ಎಲ್.ಎಸ್.ಹಿಡಕಲ್, ಕೆಂಚಗೌಡ ಪಾಟೀಲ, ಸೇರಿದಂತೆ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts: