RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಮೃತನ ಹೆಂಡತಿಗೆ ಸರಕಾರಿ ಉದ್ಯೋಗ ಹಾಗೂ 20ಲಕ್ಷ ಪರಿಹಾರ ನೀಡಬೇಕು : ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ ಮನವಿ

ಗೋಕಾಕ:ಮೃತನ ಹೆಂಡತಿಗೆ ಸರಕಾರಿ ಉದ್ಯೋಗ ಹಾಗೂ 20ಲಕ್ಷ ಪರಿಹಾರ ನೀಡಬೇಕು : ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ ಮನವಿ 

ಮೃತನ ಹೆಂಡತಿಗೆ ಸರಕಾರಿ ಉದ್ಯೋಗ ಹಾಗೂ 20ಲಕ್ಷ ಪರಿಹಾರ ನೀಡಬೇಕು : ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 17 :

 

 
ಮಾದಿಗ ಸಮುದಾಯದ ದಲಿತ ಯುವ ವೇದಿಕೆ ಅಧ್ಯಕ್ಷ ಸಿದ್ದಪ್ಪ ಕನಮಡ್ಡಿಯನ್ನು ಇತ್ತಿಚೇಗೆ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಕೊಲೆಗಟುಕರನ್ನು ಹಾಗೂ ಕೊಲೆಗೆ ಬೆಂಬಲಿಸಿದವರನ್ನು ತಕ್ಷಣ ಬಂಧಿಸಿ ಕಠೀಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಜೈ ಭೀಮ ಸಂಘರ್ಷ ಸಮಿತಿ ಅಂಬೇಡ್ಕರ ವಾಣಿ ಸಂಘಟನೆಯವರು ರವಿವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ, ಮಹಿಳೆಯರ ಮೇಲೆ ಅತ್ಯಾಚಾರ, ಬಹಿಷ್ಕಾರ ಹಾಗೂ ಕೊಲೆ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಸರಕಾರ ಇವುಗಳಿಗೆ ಕಡಿವಾಣ ಹಾಕಬೇಕು. ಗೋಕಾಕದ ಮೃತ ಸಿದ್ದಪ್ಪ ಕನಮಡ್ಡಿ ಮರಣ ಹೊಂದುವ ಸಂದರ್ಭದಲ್ಲಿ ವಿಡಿಯೋ ಮುಖಾಂತರ ಹಲ್ಲೆ ಮಾಡಿದ ವ್ಯಕ್ತಿಗಳ ಹಾಗೂ ಕುಮ್ಮಕ್ಕೂ ನೀಡಿದ ವ್ಯಕ್ತಿಗಳ ಹೆಸರುಗಳನ್ನು ಹೇಳಿರುತ್ತಾನೆ. ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಮೃತನ ಹೆಂಡತಿಗೆ ಸರಕಾರಿ ಉದ್ಯೋಗ ಹಾಗೂ 20ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಾಗುವದು.
ಈ ಸಂದರ್ಭದಲ್ಲಿ ಸಂಘಟನೆ ಉಪಾಧ್ಯಕ್ಷ ಗೋವಿಂದ ಕಳ್ಳಿಮನಿ, ಪದಾಧಿಕಾರಿಗಳಾದ ಬಸವರಾಜ ಮೇಸ್ತ್ರಿ, ಸುರೇಶ ಕಂಕಣವಾಡಿ, ಮನೋಹರ ಮ್ಯಾಗೇರಿ, ರವಿ ಕಡಕೋಳ, ಹನಮಂತ ಸೊಂಡಿ, ಬೀರಪ್ಪ ಮೈಲನ್ನವರ, ಸತೀಶ ಹರಿಜನ ಸೇರಿದಂತೆ ಅನೇಕರು ಇದ್ದರು.

Related posts: