RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಸುಡಗಾಡ ಸಿದ್ಧ ಸಮಾಜಕ್ಕೆ ವಿಶೇಷ ಪ್ಯಾಕೇಜ್ ನೀಡವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ

ಗೋಕಾಕ:ಸುಡಗಾಡ ಸಿದ್ಧ ಸಮಾಜಕ್ಕೆ ವಿಶೇಷ ಪ್ಯಾಕೇಜ್ ನೀಡವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ 

ಸುಡಗಾಡ ಸಿದ್ಧ ಸಮಾಜಕ್ಕೆ ವಿಶೇಷ ಪ್ಯಾಕೇಜ್ ನೀಡವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೆ 18 :

 

 
ಮಹಾಮಾರಿ ಕೋರೋನಾ ರೋಗದಿಂದ ಬೆಳಗಾವಿ ಜಿಲ್ಲೆಯ ಸೂಮಾರು 1 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟದಲ್ಲಿದ್ದು, ನಮಗೆ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಸುಡುಗಾಡು ಸಿದ್ಧ ಮಹಾ ಸಂಘ ಬೆಳಗಾವಿ ಜಿಲ್ಲಾ ಶಾಖೆಯ ಬೆಳಗಾವಿ ಜಿಲ್ಲಾ ಘಟಕದವರು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು

ತಮ್ಮ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಸೋಮವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಸೇರಿದ ಸುಡಗಾಡ ಸಿದ್ಧರು ತಮ್ಮ ಸಮಾಜಕ್ಕೆ ಪರಿಹಾರ ನೀಡುವಂತೆ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು
ಸುಡಗಾಡು ಸಿದ್ಧ ಸಮಾಜ ಅಲೆಮಾರಿ ಸಮಾಜವಾಗಿದ್ದು, ಊರು ,ಊರು ಸುತ್ತಾಡಿ ಸಣ್ಣ ಪುಟ್ಟ ವ್ಯಾಪಾರದಲ್ಲಿ ತಮ್ಮ ಉಪ ಜೀವನವನ್ನು ಸಾಗಿಸುತ್ತಿದ್ದಾರೆ . ಲಾಕಡೌನದಿಂದ ಉದ್ಯೋಗವಿಲ್ಲದೆ ಜೀವನ ನಡೆಸುವದು ಕಷ್ಟವಾಗಿದೆ ಕೇಂದ್ರ ಸರಕಾರ ಜಾರಿಗೆ ತಂದ ವಿಶೇಷ ಪರಿಹಾರ ಯೋಜನೆಯಲ್ಲಿ ಈ ಸಮಾಜವನ್ನು ಸೇರಿಸಿ ಪರಿಹಾರ ಕಲ್ಪಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ

ಈ ಸಂದರ್ಭದಲ್ಲಿ ನಾಗಪ್ಪ ಹೊಲದವರ , ವಿರಣ್ಣ ಸಂಗಮನವರ , ನಾಗಪ್ಪ ಈಮದ್ದಿ , ಸ್ವಾಮಿ ಕೋಮಾಲಿ , ಎಚ್.ಬಿ ಗೋಬ್ಬಲದವರ , ಈ.ಜೆ ಕೋಮಾಲಿ , ಭೀಮಪ್ಪ ಘಂಟೆನ್ನವರ ,ಯಲಪ್ಪ ಘಂಟೆನ್ನವರ , ಮಾರುತಿ ಕೋಮಾಲಿ ಸೇರಿದಂತೆ ಅನೇಕರು ಇದ್ದರು

Related posts: