RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೇ ಉಳಿಸುವಂತೆ ಕರವೇ ಆಗ್ರಹ

ಗೋಕಾಕ:ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೇ ಉಳಿಸುವಂತೆ ಕರವೇ ಆಗ್ರಹ 

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೇ ಉಳಿಸುವಂತೆ ಕರವೇ ಆಗ್ರಹ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 18 :

 

 

ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗೀಯ ಕಛೇರಿಯ ಉಪ ನಿರ್ದೇಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೇ ಉಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು

ಸೋಮವಾರದಂದು ನಗರದ ತಹಶೀಲ್ದಾರ ಕಛೇರಿಯಲ್ಲಿ ಸೇರಿದ ಕರವೇ ಕಾರ್ಯಕರ್ತರು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ಪ್ರವಾಸೋದ್ಯಮ ಸಚಿವರಿಗೆ ಪ್ರತ್ಯೇಕ ಮನವಿಗಳನ್ನು ಅರ್ಪಿಸಿದರು
ಕಳೆದ ಹತ್ತಾರು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗೀಯ ಕಛೇರಿಯ ಉಪ ನಿರ್ದೇಶಕರ ಹುದ್ದೆ ಇರುವದರಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ವಿಭಾಗದಲ್ಲಿ ಬುರುವ 200 ಪ್ರವಾಸೋದ್ಯಮ ತಾಣಗಳು ಬೆಳಗಾವಿ ವಿಭಾಗದಲ್ಲಿ ಬರುತ್ತವೆ ಅದರಲ್ಲಿ ಪ್ರಮುಖ ವೆಂದರೆ ಗೋಕಾಕ ಜಲಪಾತ , ಗೋಡಚನಮಲ್ಕಿ ಜಲಪಾತ, ವಿಜಯಪುರದ ಗೋಲಗುಮ್ಮಟ , ಸವದತ್ತಿ ಯಲ್ಲಮ್ಮನದೇವಸ್ಥಾನ, ಆಲಮಟ್ಟಿ ಜಲಾಶಯ , ಬಾದಾಮಿ ಐಹೋಳೆ, ಪಟ್ಟದಕಲ್ಲು ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿಗೆ ವರ್ಷವಿಡಿ ಲಕ್ಷಾನೂಗಟ್ಟಲೆ ಪ್ರವಾಸಿಗರು ಬಂದು ಪ್ರವಾಸೋದ್ಯಮಕ್ಕೆ ದೊಡ್ಡ ಪ್ರವಾಣದ ಉತ್ತೇಜನ ಸಿಗುತ್ತಿದ್ದೆ ಇದರಿಂದ ಈ ಭಾಗದಲ್ಲಿ ಹಲವಾರು ಉದ್ಯಮಗಳು ಸ್ಥಾಪನೆಗೊಂಡು ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಪ್ರವಾಸಿ ತಾಣಗಳ ಅಭಿವೃದ್ಧಿಯೂ ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದೆ ಆದರೆ ಸರಕಾರ ಆತುರದ ನಿರ್ಧಾರವನ್ನು ತೆಗೆದುಕೊಂಡು ಸದ್ದಿಲ್ಲದೆ ಬೆಳಗಾವಿಯ ವಿಭಾಗೀಯ ಉಪ ನಿರ್ದೇಶಕರ ಹುದ್ದೆಯನ್ನು ದಕ್ಷಣ ಕನ್ನಡ ಕ್ಕೆ ಸ್ಥಳಾಂತರಿಸಲು ಹುನ್ನಾರ ನಡೆಸಿರುವದು ಖಂಡನಾರ್ಹಾವಾಗಿದೆ .ಕೂಡಲೆ ಸರಕಾರ ಎಚ್ಚೆತ್ತುಕೊಂಡು ಕ್ರಮ ನಿರ್ಧಾರವನ್ನು ಕೈ ಬಿಟ್ಟು ವಿಭಾಗೀಯ ಪ್ರವಾಸೋದ್ಯಮ ಇಲಾಖೆ ಮತ್ತು ಉಪ ನಿರ್ದೆಶಕರ ಹುದ್ದೆಯನ್ನು ಬೆಳಗಾವಿಯಲ್ಲಿಯೆ ಉಳಿಸಲು ಸೂಕ್ತ ಕ್ರಮ ಕೈಗೋಳ್ಳಬೇಕೆಂದು ಸಕಲ ಕನ್ನಡಿಗರ ಪರವಾಗಿ ಮನವಿಯಲ್ಲಿ ವಿನಂತಿಸಿದ್ದಾರೆ ಇದಕ್ಕೆ ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ಬೆಳಗಾವಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ

ಈ ಸಂಧರ್ಭದಲ್ಲಿ ಕರವೇ ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು

Related posts: