RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರ ಒತ್ತಾಯ

ಗೋಕಾಕ:ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರ ಒತ್ತಾಯ 

ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರ ಒತ್ತಾಯ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :

 

ನೆರೆ ಬಂದ್ಹೋಗಿ 10 ತಿಂಗಳು ಕಳೆದರೂ ನೆರೆ ಸಂತ್ರಸ್ತರಿಗೆ ಇನ್ನೂವರೆಗೂ ಪರಿಹಾರ ಸಿಕ್ಕಿಲ್ಲ. ಅವರಿಗೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರು ತಹಶೀಲದಾರ ಅವರನ್ನು ಒತ್ತಾಯಿಸಿದರು.
ಗುರುವಾರದಂದು ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಸಭೆ ಸೇರಿದ ರೈತ ಸಂಘದ ಮುಖಂಡರು, ಕೆಲವೊಂದು ಗ್ರಾಮಗಳಲ್ಲಿ ನಿಜವಾದ ಫಲಾನುಭವಿಗೆ ಪರಿಹಾರ ದೊರಕಿರುವುದಿಲ್ಲ, ಕಳೆದ ವರ್ಷ ಬಾರಿ ಪ್ರಮಾಣದಲ್ಲಿ ಪ್ರವಾಹದಿಂದ ತತ್ತರಿಸುವ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ನೆರೆ ಸಂತ್ರಸ್ತರಿಗೆ 8ದಿನದಲ್ಲಿ ಪರಿಹಾರವನ್ನು ನೀಡಬೇಕು ಇಲ್ಲವಾದಲ್ಲಿ ದನ-ಕರುಗಳೊಂದಿಗೆ ಆಗಮಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೊರೊನಾ ಮಹಾಮಾರಿಯಿಂದಾಗಿ ರೈತ ಬೇಳೆದ ತೋಟಗಾರಿಕೆ ಬೇಳೆಗಳಿಗೆ ಸರಿಯಾದ ಬೆಲೆ ಸಿಗದೇ ಇರುವುದರಿಂದ ಹತಾಶೆಗೊಂಡು ಬೇಳೆದ ಹೂ ಹಾಗೂ ತರಕಾರಿ ಬೇಳೆಗಳನ್ನು ರೂಟರ್ ಹೊಡೆಯುವ ಮೂಲಕ ನಾಶ ಮಾಡಿದ್ದು ಅಂಥ ರೈತರ ಜಮೀನು ಗುರುತಿಸಿ ಸರ್ವೆ ಮಾಡಿ ಅವರಿಗೂ ಕೂಡಾ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಒತ್ತಾಯಿಸಿದ ರೈತ ಮುಖಂಡರು, ಅವರ ಮನವಿಗೆ ಸ್ಪಂದಿಸಿದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ ಅವರು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಚಿವರ ಅಸಭ್ಯ ವರ್ತನೆಗೆ ಖಂಡನೆ: ಕೋಲಾರ ಜಿಲ್ಲೆಯಲ್ಲಿ ಚೆಕ್‍ಡ್ಯಾಮ್ ಹಾಗೂ ಕೆರೆಗಳು ವೀಕ್ಷಣೆಗೆ ಆಗಮಿಸಿದ್ದ ಸಚಿವ ಮಾದುಸ್ವಾಮಿ ಅವರು, ರೈತ ಸಂಘದ ಕೋಲಾರ ಜಿಲ್ಲಾಧ್ಯಕ್ಷೆ ಎ.ನಳಿನಿ ಅವರು ಕೆರೆಗಳ ಬಗ್ಗೆ ವಾಸ್ತವಾಂಸಗಳನ್ನು ವಿವರಿಸಲು ಬಂದಾಗ ಅವರಿಗೆ ಅವಹೇಳನಾಕಾರಿಯಾಗಿ ಮಾತನಾಡಿದ ಸಚಿವರ ಬಗ್ಗೆ ತೀವೃ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಮಹಿಳೆಯರ ಬಗ್ಗೆ ಅಸಭ್ಯವಾಗಿ ನಡೆದುಕೊಳ್ಳುವ ಸಚಿವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ, ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ, ಗೋಪಾಲ ಕುಕನೂರ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಗುರುನಾಥ ಹುಕ್ಕೇರಿ, ಶ್ರೀಶೈಲ ಅಂಗಡಿ, ರವಿ ನುಚ್ಚುಂಡಿ, ಮಂಜುನಾಥ ಪೂಜೇರಿ, ಮಂಜು ಗದಾಡಿ, ರವೀಂದ್ರ ಮರ್ದಿ, ಸತ್ತೆಪ್ಪ ಕಣಗಲಿ, ನಾಗಪ್ಪ ಮರ್ದಿ, ಬಾಳಪ್ಪ ಗದಾಡಿ ಸೇರಿದಂತೆ ಅನೇಕರು ಇದ್ದರು.

Related posts: