ಗೋಕಾಕ:ವೃತ್ತಿ ಪರ ಅಡುಗೆ ತಯಾರಕರು, ಮಾಲಿಕರು ಹಾಗೂ ಅಡುಗೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ
ವೃತ್ತಿ ಪರ ಅಡುಗೆ ತಯಾರಕರು, ಮಾಲಿಕರು ಹಾಗೂ ಅಡುಗೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 21 :
ವೃತ್ತಿ ಪರ ಅಡುಗೆ ತಯಾರಕರು, ಮಾಲಿಕರು ಹಾಗೂ ಅಡುಗೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಗೋಕಾಕ ತಾಲೂಕಾ ಅಡುಗೆ ತಯಾರಕರ ಸಂಘದ ಪದಾಧಿಕಾರಿಗಳು ತಹಶೀಲದಾರ ಅವರಿಗೆ ಮನವಿ ಸಲ್ಲಿಸಿದರು.
ಗುರುವಾರದಂದು ಮಿನಿ ವಿಧಾನ ಸೌಧ ಮುಂದೆ ಸೇರಿದ ಗೋಕಾಕ ತಾಲೂಕಾ ಅಡುಗೆ ತಯಾರಕರ ಸಂಘದ ಪದಾಧಿಕಾರಿಗಳು ಕೊರೋನಾ ಮಹಾಮಾರಿಯಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ತೀವೃ ಆರ್ಥಿಕ ಸಂಕಟದಲ್ಲಿ ಇದ್ದು ಕೂಡಲೇ ಆರ್ಥಿಕ ನೆರವನ್ನು ನೀಡಬೇಕೆಂದು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ವೃತ್ತಿ ಪರ ಅಡುಗೆ ತಯಾರಕರು ಮಾಲಿಕರು ಹಾಗೂ ಅಡುಗೆ ಕಾರ್ಮಿಕರ ಉದ್ಯೋಗವು ಬೇಸಿಗೆ ಕಾಲದಲ್ಲಿ ಅಂದರೆ ಮಾರ್ಚ್, ಎಪ್ರೀಲ್, ಮೇ ತಿಂಗಳಿನಲ್ಲಿ ಮದುವೆ, ಸಭೆ, ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಕೊರೋನಾ ಮಹಾಮಾರಿಯಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ನಿಂತು ಹೋಗಿರುವುದರಿಂದಾಗಿ ತೀವೃ ಆರ್ಥಿಕ ಸಂಕಟವನ್ನು ಅನುಭವಿಸುತ್ತಿದ್ದು, ನಮ್ಮ ಜೀವನ ಅಸ್ತವ್ಯಸ್ತವಾಗಿ ಸ್ಥಬವಾಗಿದೆ. ಈ ಉದ್ಯೋಗವನ್ನು ನಂಬಿ ಗೋಕಾಕ ತಾಲೂಕಿನಲ್ಲಿ ಸುಮಾರು 100 ಜನ ಮಾಲೀಕರು, 2000ಕ್ಕೂ ಹೆಚ್ಚು ಕಾರ್ಮಿಕರು ಇದ್ದಾರೆ. ಇತರಿಗೆ ಆರ್ಥಿಕ ನೆರವನ್ನು ನೀಡಿದಂತೆ ಕೂಡಲೇ ವೃತ್ತಿ ಪರ ಅಡುಗೆ ತಯಾರಕರು ಮಾಲಿಕರು ಹಾಗೂ ಅಡುಗೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಿ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಆನಂದ ಪಟೋಳಿ, ಸತ್ತೆಪ್ಪ ಬನ್ನಿಶೆಟ್ಟಿ, ವಿಲಾಸ ಕಾಳಮ್ಮನಗುಡಿ, ಬಸವರಾಜ ದೇಸಾಯಿ, ಅಡಿವೆಪ್ಪ ಸಂಗಣ್ಣವರ, ಅದೃಶಪ್ಪ ಗಿಡ್ನವರ, ಮಲ್ಲಿಕಾರ್ಜುನ ಮೂಲಿಮನಿ, ಈರಣ್ಣ ಸರ್ವಿ, ಗುರುಪುತ್ರಪ್ಪ ದುಂಡಾನಟ್ಟಿ, ಸುರೇಶ ಖನಗಾಂವಿ, ರಾಮಣ್ಣ ಪೂಜೇರಿ, ಚಂದ್ರಶೇಖರ ಪಟೋಳಿ, ಮಲ್ಲಪ್ಪ ಮಮದಾಪೂರ, ಲಕ್ಷ್ಮಪ್ಪ ಕರಿಗಾರ, ಬಸವರಾಜ ಕುಲಗೋಡ, ಚನ್ನಬಸವೇಶ್ವರ ಬನ್ನಿಶೆಟ್ಟಿ, ರವಿ ಮಡಿವಾಳರ ಸೇರಿದಂತೆ ಅನೇಕರು ಇದ್ದರು.