ಗೋಕಾಕ:178 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಎಲ್.ಡಿ.ಎಸ್ ಪೋಟೋ ಸ್ಟುಡಿಯೋ ವತಿಯಿಂದ ವಿನೂತನ ಕಾರ್ಯ
178 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಎಲ್.ಡಿ.ಎಸ್ ಪೋಟೋ ಸ್ಟುಡಿಯೋ ವತಿಯಿಂದ ವಿನೂತನ ಕಾರ್ಯ
ಗೋಕಾಕ ಅ 19: 178ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಇಲ್ಲಿಯ ಎಲ್.ಡಿ ಎಸ್ ಪೋಟೋ ಸ್ಟುಡಿಯೋ ಹಾಗೂ ಗೆಳೆಯರ ಬಳಗದ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಾಯಿತು
ನಗರದ ಬಸವೇಶ್ವರ ವೃತ್ತದಲ್ಲಿ ತವಗದ ಶ್ರೀ ಬಾಳಯ್ಯ ಮಹಾಸ್ವಾಮಿಗಳು ರಸ್ತೆ ನಿಯಮಗಳನ್ನು ಪಾಲಿಸುವ ಕರ ಪತ್ರ ಮತ್ತು ಗೂಲಾಬಿ ಹೂ ಗಳನ್ನು ವಾಹನ ಸವಾರರಿಗೆ ನೀಡುವ ಮೂಲಕ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ , ಆರೀಪ ಪೀರಜಾದೆ ,ವಸಂತರಾವ ಚವ್ಹಾಣ , ಎಲ್.ಡಿ.ಎಸ್ ನ ಮಾಲೀಕರಾದ ಗುರು ಮತ್ತು ಶಂಕರ ಯಮಕನಮರಡಿ , ಸಾಧಿಕ ಹಲ್ಯಾಳ ,ಅಬ್ಬಾಸ ದೇಸಾಯಿ , ಮುಗುಟ ಪೈಲವಾನ , ಮಲ್ಲಪ್ಪ ತಲೇಪ್ಪಗೋಳ, ದಶರಥ ಕಿಲಾರಿ , ಮಹಾನಿಂಗ ಕೆಂಚನ್ನವರ , ಜಗದೀಶ ನಿರ್ವಾಣಿ , ಹನೀಫ್ ಸನದಿ , ಮಂಜು ಖಾನಪ್ಪನವರ , ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
ನಂತರ ಸುಮಾರು ಎರೆಡು ಘಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕರ ಪತ್ರ ಮತ್ತು ಗೂಲಾಬಿ ಹೂ ಗಳನ್ನು ನೀಡಿ ವಿನಂತಿಸಲಾಯಿತು