RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕ್ರೈಸ್ತ ಸ್ಮಶಾನ ಭೂಮಿಯನ್ನು ಇಗಿದ್ದ ಸ್ಥಳದಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ಮನವಿ

ಗೋಕಾಕ:ಕ್ರೈಸ್ತ ಸ್ಮಶಾನ ಭೂಮಿಯನ್ನು ಇಗಿದ್ದ ಸ್ಥಳದಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ಮನವಿ 

ಕ್ರೈಸ್ತ ಸ್ಮಶಾನ ಭೂಮಿಯನ್ನು ಇಗಿದ್ದ ಸ್ಥಳದಲ್ಲಿಯೇ ಮುಂದುವರೆಸುವಂತೆ ಒತ್ತಾಯಿಸಿ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 28 :

 
ನಗರದಲ್ಲಿರುವ ಕ್ರೈಸ್ತ ಸ್ಮಶಾನ ಭೂಮಿಯನ್ನು ಇಗಿದ್ದ ಸ್ಥಳದಲ್ಲಿಯೇ ಮುಂದುವರೆಸುವಂತೆ ಆಗ್ರಹಿಸಿ ಕ್ರೈಸ್ತ ಸಮುದಾಯ ಟ್ರಸ್ಟ ನವರು ಗುರುವಾರದಂದು ತಹಸೀಲ್ದಾರ ಅವರಿಗೆ ಮನವಿ ಅರ್ಪಿಸಿದರು

ಈ ಸ್ಮಶಾನ ಭೂಮಿಯು ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರ ಹಾಗೂ ಪೌರಾಯುಕ್ತರು ಕ್ರೈಸ್ತ ಸಮುದಾಯದ ಕಬ್ಜಾ ನೀಡಿರುತ್ತಾರೆ ನಗರಸಭೆಯಲ್ಲಿ ಕ್ರೈಸ್ತ ಧರ್ಮದ ಸಾರ್ವಜನಿಕ ರುದ್ರಭೂಮಿ ಎಂದು ದಾಖಲಿಸಲಾಗಿದೆ. ಕಳೆದ ಎರೆಡು ವರ್ಷಗಳ ಹಿಂದೆಯೇ ತಂತಿ ಬೆಲ್ಲಿ ಹಾಕಿ ಸಸಿಗಳನ್ನು ಬೆಳೆಸಲಾಗಿದೆ . ನಮ್ಮ ಧರ್ಮದ ಪ್ರಕಾರ ಹೆಣಗಳನ್ನು ಉಳ್ಳುವ ಪದ್ದತಿ ಇದ್ದು, ಇದರಿಂದ ಯಾರಿಗು ತೊಂದರೆ ಆಗುವುದಿಲ್ಲ ಈ ಸ್ಮಶಾನ ಭೂಮಿಯ ಸಮೀಪ ಅಂಬೇಡ್ಕರ ನಗರದಲ್ಲಿ ವಾಸಿಸುತ್ತಿರುವ ಕೆಲವು ಪಟ್ಟಬದ್ದ ಹಿತಾಶಕ್ತಿಗಳು ಈ ಸ್ಮಶಾನ ಭೂಮಿಯನ್ನು ಕಬಳಿಸಲು ಹೂನ್ನಾರ ನಡೆಸುತ್ತಿದ್ದಾರೆ . ಈ ಸ್ಮಶಾನ ಜಾಗೆಯು ಕ್ರೈಸ್ತ ಸಮುದಾಯದವರು ಉಪಯೋಗಿಸಲು ಯಾವುದೇ ಅಡ್ಡಿ ಆತಂಕಗಳು ಬರದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೆಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯ ಟ್ರಸ್ಟಿನ ಗೌರಾವಾಧ್ಯಕ್ಷ ಪಾಧರ ಎಬಿನೇಜರ ಕರಬಣ್ಣವರ , ಅಧ್ಯಕ್ಷ ಪಾಧರ ಪ್ರವೀಣ ದಾವನೆ, ಪದಾಧಿಕಾರಿಗಳಾದ ಆನಂದ ಬೆಟಗೇರಿ , ಸಂಜು ಚಿಂಚಲಿ , ಪಿ.ಕೆ ತಳವಾರ ,ಪಿ . ಸಾಮುಮಿಲ್ , ಸಂಜಯ ಎಸ್.ಎನ್ , ಶೇಖರ ಡಿ, ವಿಲ್ಸನ ಸಾಮುವಿಲ್ , ಸಚಿನ ಚಿಚಡಿ , ಶಶಿಕಾಂತ ಹೊಸಮನಿ , ಸಂತೋಷ ದಾವನ ಸೇರಿದಂತೆ ಎಲ್ಲ ಪದಾಧಿಕಾರಿಗಳು ಇದ್ದರು

Related posts: