RNI NO. KARKAN/2006/27779|Wednesday, December 18, 2024
You are here: Home » Others » ಗೋಕಾಕ:ಕೊನೆಗೂ ಒಲಿದ ಅದೃಷ್ಟ : ಬೆಳಗಾವಿ ಉಸ್ತುವಾರಿ ಸಚಿವರಾಗಿ ರಮೇಶ ಜಾರಕಿಹೊಳಿ ನೇಮಕ

ಗೋಕಾಕ:ಕೊನೆಗೂ ಒಲಿದ ಅದೃಷ್ಟ : ಬೆಳಗಾವಿ ಉಸ್ತುವಾರಿ ಸಚಿವರಾಗಿ ರಮೇಶ ಜಾರಕಿಹೊಳಿ ನೇಮಕ 

ಕೊನೆಗೂ ಒಲಿದ ಅದೃಷ್ಟ : ಬೆಳಗಾವಿ ಉಸ್ತುವಾರಿ ಸಚಿವರಾಗಿ ರಮೇಶ ಜಾರಕಿಹೊಳಿ ನೇಮಕ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 2 :

 

 

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬಿಜೆಪಿ ಸರಕಾರದಲ್ಲಿ ಪ್ರತಿಷ್ಠಿತ ಜಲಸಂಪನ್ಮೂಲ ಖಾತೆ ಪಡೆದು ಕೊಂಡಿರುವ ಸಚಿವ ರಮೇಶ ಜಾರಕಿಹೊಳಿ ಅವರು ಕಳೆದ 3 ತಿಂಗಳಿನಿಂದ ಜಿಲ್ಲಾ ಉಸ್ತುವಾರಿ ಸ್ಥಾನ ಗಿಟ್ಟಿಸುವಲ್ಲಿ ಪ್ರಯತ್ನ ನಡೆಸಿದ್ದರು ಆದರೆ ಸರಕಾರ ಪಕ್ಕದ ಧಾರವಾಡ ಜಿಲ್ಲೆಯ ಜಗದೀಶ ಶೆಟ್ಟರ ಅವರಿಗೆ ಬೆಳಗಾವಿ ಜಿಲ್ಲೆಯನ್ನು ಹೆಚ್ಚುವರಿಯಾಗಿ ನೀಡಿ ಕಾರ್ಯಪ್ರವೃತ್ತವಾಗಿತ್ತು . ಕೊನೆಗೆ ಜಗದೀಶ್ ಶೆಟ್ಟರ್ ಅವರ ಹೆಚ್ಚುವರಿ ಹೊರೆಯನ್ನು ಇಳಿಸಿರುವ ಸರಕಾರ ರಮೇಶ ಜಾರಕಿಹೊಳಿ ಅವರನ್ನು ನೂತನವಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ನೀಡಿ ಆದೇಶಿಸಿದೆ .

Related posts: