RNI NO. KARKAN/2006/27779|Sunday, October 20, 2024
You are here: Home » breaking news » ಗೋಕಾಕ:ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ಒಕ್ಕರಿಸಿದ ಕೊರೋನಾ : 2 ತಾಲೂಕಿನಲ್ಲಿ ಒಂದೊಂದು ಪ್ರಕರಣ ದೃಢ

ಗೋಕಾಕ:ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ಒಕ್ಕರಿಸಿದ ಕೊರೋನಾ : 2 ತಾಲೂಕಿನಲ್ಲಿ ಒಂದೊಂದು ಪ್ರಕರಣ ದೃಢ 

ಗೋಕಾಕ ಮತ್ತು ಮೂಡಲಗಿ ತಾಲೂಕಿಗೆ ಒಕ್ಕರಿಸಿದ ಕೊರೋನಾ : 2 ತಾಲೂಕಿನಲ್ಲಿ ಒಂದೊಂದು ಪ್ರಕರಣ ದೃಢ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ.2-

 
ಗೋಕಾಕ ತಾಲೂಕಿನ ಶಿಲ್ತಿಭಾಂವಿಯಲ್ಲಿ ಯುಪಿಎಸ್‍ಸಿ ಕೋಚಿಂಗ್ ಪಡೆಯಲು ಐವರು ಸಹಪಾಠಿಗಳ ಜೊತೆ ಹೊಸದಿಲ್ಲಿಗೆ ಹೋಗಿದ್ದವರ ಪೈಕಿ ಒಬ್ಬರಿಗೆ ಕೊರೋನಾ ಸೋಂಕು ದೃಢ ಪಟ್ಟಿದ್ದು , ತಾಲೂಕಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ .
ದೆಹಲಿಯಿಂದ ಹಿಂತಿರುಗಿದ ಈ ಐವರನ್ನು ತಪಾಸಣೆ ನಡೆಸಿ ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ ಕ್ವಾರಂಟೈನ್‍ನಲ್ಲಿದ್ದ ಈ ಐವರನ್ನು ವರದಿ ಬರುವ ಮುನ್ನವೇ ಕ್ವಾರಂಟೈನ್‍ದಿಂದ ಬಿಡುಗಡೆ ಮಾಡಲಾಗಿತ್ತು. ಈಗ ಐವರಲ್ಲಿ ಓರ್ವನಿಗೆ ಕೊರೋನಾ ತಗಲಿದ್ದು ಧೃಡಪಟ್ಟಿದ್ದು ಇಡೀ ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.

ದೇಶದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಮಹಾಮಾರಿ ಕೊರೋನಾ ವೈರಸ್ ಗೋಕಾಕ ಹಾಗೂ ಮೂಡಲಗಿ ತಾಲೂಕಿಗೂ ಒಕ್ಕರಿಸಿದ್ದು ಶಿಲ್ತಿಭಾಂವಿ ಹಾಗೂ ಕಲ್ಲೋಳಿ ಗ್ರಾಮದಲ್ಲಿ ಎರಡು ಪ್ರಕರಣಗಳು ಕಂಡು ಬಂದಿದ್ದು ಎರಡೂ ತಾಲೂಕುಗಳ ಜನರಲ್ಲಿ ಭೀತಿಯನ್ನು ಉಂಟು ಮಾಡಿದೆ.

ಕ್ವಾರಂಟೈನ್ ಅವಧಿ ಮುಗಿಯುವ ಪೂರ್ವದಲ್ಲಿಯೇ ಅವರನ್ನು ತಾಲೂಕಾಡಳಿತ ಬಿಡುಗಡೆ ಮಾಡಿದ್ದರ ಬಗ್ಗೆ ಜನರ ತೀವ್ರ ವಿರೋಧ ವ್ಯಕ್ತವಾಗುವ ಸಂದರ್ಭದಲ್ಲಿಯೇ ಕೊರೋನಾ ಸೋಂಕು ಧೃಡಪಟ್ಟಿದ್ದು ತಾಲೂಕಾಡಳಿತದ ವಿರುದ್ಧ ಜನಾಕ್ರೋಶ ಭುಗಿಲೇಳುವ ಸಂಭವ ಕಂಡು ಬರುತ್ತಿದೆ. ದೇಶದಾದ್ಯಂತ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿಯೇ ಜೀವನ ಸಾಗಿಸುವ ಸಂದರ್ಭದಲ್ಲಿ ಗೋಕಾಕ ತಾಲೂಕಿನ ಶಿಲ್ತಿಭಾಂವಿ ಹಾಗೂ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿರುವದು ಭೀತಿಯನ್ನುಂಟು ಮಾಡಿದೆ.
ತಾಲೂಕಾಡಳಿತ, ಪೋಲೀಸ ಇಲಾಖೆ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತು ಸೋಂಕಿತ ವ್ಯಕ್ತಿಗಳು ವಾಸಿಸುವ ಮನೆಯ 100 ಮೀಟರ ಪ್ರದೇಶವನ್ನು ಸೀಲ್‍ಡೌನ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ಮುಂಬೈನಿಂದ ಆಗಮಿಸಿದ ಮೂರು 3 ಜನರ ಪೈಕಿ ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವದು ಧೃಡವಾಗಿದೆ.
ದೇಶದಲ್ಲಿ ಕೊರೋನಾ ಸೋಂಕು ಕಂಡು ಬಂದ ಬಳಿಕ ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಯಾವುದೇ ಕೊರೋನಾ ಪ್ರಕರಣಗಳು ಕಂಡು ಬಂದಿರಲಿಲ್ಲ. ಆದರೆ ಮುಂಬೈ ಮತ್ತು ದಿಲ್ಲಿಯಿಂದ ಆಗಮಿಸಿದ ಜನರ ಪೈಕಿ ಇಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು ಎರಡೂ ತಾಲೂಕಿನ ಜನರಲ್ಲಿ ಆಂತಕವನ್ನು ಸೃಷ್ಟಿಸಿದೆ.

Related posts: