ಗೋಕಾಕ:ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಡೆಸಿ :ಕೆ.ಬಿ.ಬೆಣ್ಣಿ
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಡೆಸಿ :ಕೆ.ಬಿ.ಬೆಣ್ಣಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 2 :
ಸಮೀಪದ ಅರಭಾಂವಿ ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರದಂದು ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಸಾರ್ವಜನಿಕರಿಗೆ ಕೊರೋನಾ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು.
ಮುಖ್ಯಾಧಿಕಾರಿ ಕೆ.ಬಿ.ಬೆಣ್ಣಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಅತಿ ಸಮೀಪದಲ್ಲಿರುವ ಕಲ್ಲೋಳಿ ಪಟ್ಟಣದಲ್ಲಿ ಓರ್ವನಿಗೆ ಕೊರೋನಾ ಸೊಂಕು ಇರುವುದು ಪತ್ತೆಯಾಗಿದೆ ಅಲ್ಲದೇ ಗೋಕಾಕ ತಾಲೂಕಿನ ಶಿಲ್ತಿಭಾಂವಿಯಲ್ಲೂ ಕೂಡಾ ಸೊಂಕು ಪತ್ತೆಯಾಗಿದ್ದು ಸಾರ್ವಜನಿಕರು ಜಾಗೃತಿಯನ್ನು ವಹಿಸಬೇಕು. ತಮ್ಮ ದಿನ ನಿತ್ಯ ವಸ್ತುಗಳನ್ನು ಹಾಗೂ ಇತರೆ ಕೆಲಸ ಕಾರ್ಯಗಳಿಗೆ ಗೋಕಾಕ ನಗರಕ್ಕೆ ಹಾಗೂ ಇತರೆ ಗ್ರಾಮಗಳಿಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾಯ್ದು ಹೋಗುವ ವಾಹನಗಳ ಚಾಲಕರು ತಮ್ಮಲ್ಲಿ ಖರೀದಿಗೆ ಬಂದಾಗ ಅಂತರವನ್ನು ಕಾಯ್ದುಕೊಂಡು ತಮ್ಮ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಡೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ ಮಾದರ, ಅಡಿವೆಪ್ಪ ಬಿಲಕುಂದಿ, ಕುಮಾರ ಪೂಜೇರಿ, ಈರಪ್ಪ ಹೊಲದವರ, ಆನಂದ ಡೊಂಬರ, ಸಂತೋಚ ಮರಕುಂಬಿ, ವೆಂಕಟೇಶ ಈಳಿಗೇರ, ಬಸು ಕಡೆಮನಿ ಸೇರಿದಂತೆ ಅನೇಕರು ಇದ್ದರು.