RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:24×7 ನೀರು ಪೂರೈಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ರಮೇಶ ಸೂಚನೆ

ಗೋಕಾಕ:24×7 ನೀರು ಪೂರೈಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ರಮೇಶ ಸೂಚನೆ 

24×7 ನೀರು ಪೂರೈಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಿ : ಅಧಿಕಾರಿಗಳಿಗೆ ಸಚಿವ ರಮೇಶ ಸೂಚನೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 6 :

 
24×7 ನೀರು ಸರಬರಾಜು ಸರಿಯಾಗಿ ಪೂರೈಕೆ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳಬೇಕು ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು

ಶನಿವಾರದಂದು ನಗರಸಭೆ ಸಭಾಂಗಣದಲ್ಲಿ ನಡೆದ ನಗರಸಭೆ ಅಧಿಕಾರಿಗಳ ಹಾಗೂ ನಗರಸಭೆ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

24×7 ನೀರು ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಇರುವದರಿಂದ ಶೇಕಡಾ 30℅ ಪ್ರತಿಷ್ಠಿತ ಜನರು ಮಾತ್ರ ನೀರಿನ ಕರವನ್ನು ಪಾವತಿ ಮಾಡುತ್ತಿದ್ದಾರೆ ಇನ್ನುಳಿದ 70% ಪ್ರತಿಷತ ಜನರು ನೀರಿನ ಕರವನ್ನು ಪಾವತಿಸುತ್ತಿಲ್ಲ ಅವರು ಸಮಸ್ಯೆಗಳನ್ನು ತಿಳಿದುಕೊಂಡು ಅವರ ಸಮಸ್ಯೆಗಳಿಗೆ ಆದಷ್ಟು ತ್ವರಿತಗತಿಯಲ್ಲಿ ಮಾಡಿ ಬಾಕಿ ಉಳಿದಿರುವ ನೀರಿನ ಕರವನ್ನು ಹಂತ ಹಂತವಾಗಿ ಪಾವತಿಸಿಕೊಳ್ಳಬೇಕು .
ಪ್ರತಿ ವಾರ್ಡ ಸದಸ್ಯರನ್ನು ಕರೆದುಕೊಂಡು ವಾರ್ಡಗಳಿಗೆ ಭೇಟಿ ನೀಡಿ ಆ ವಾರ್ಡದಲ್ಲಿ ಎಷ್ಟು ಜನರಿಗೆ 24×7 ನೀರು ಸರಬರಾಜು ಇದೆ ಎಷ್ಟು ಜನರಿಗೆ ಇನ್ನು ಕನೆಕ್ಷನ್ ನೀಡಲಾ , ಅವರು ಯಾಕೆ ನೀರಿನ ಕರ ಭರಿಸುತ್ತಿಲ್ಲ ಎಂಬೆಲ್ಲ ವಿಷಯಗಳನ್ನು ತಿಳಿದುಕೊಂಡು ಸ್ಥಳದಲ್ಲೇ ಅವರ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು 24× 7 ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.
2010 ರಿಂದ ಇಲ್ಲಿಯವರೆಗೆ ನಗರದಲ್ಲಿ ಯಾವ ಯಾವ ಹೊಸ ಬಡಾವಣೆಗಳು ನಿರ್ಮಾಣವಾಗಿವೆ ಅವುಗಳಲ್ಲಿ ಕೆಲವು ಬಡಾವಣೆಗಳಿಗೆ ಇನ್ನೂ 24×7 ನೀರು ಪೂರೈಕೆಯಾಗಿಲ್ಲ ಆದಷ್ಟು ಬೇಗ ಅದನ್ನು ಪೂರೈಸಲು ತ್ವರಿತ ಕ್ರಮ ಜರುಗಿಸಬೇಕು ಎಂದು ಸಚಿವರು ಸೂಚಿಸಿದರು .

ನಗರದ ಶೌಚಾಲಯಗಳು , ಗಟಾರುಗಳು ಸಂಪೂರ್ಣ ಹದಗೆಟ್ಟಿವೆ ಅಧಿಕಾರಿಗಳು ಸರಿಯಾಗಿ ಸ್ವಚ್ಛ ಮಾಡುತ್ತಿಲ್ಲ ನರಸಭೆ ಸದಸ್ಯರ ಎಸ್.ಎ ಕೊತವಾಲ ಸಭೆಯ ಗಮನಕ್ಕೆ ತಂದಾಗ ಸಚಿವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೊರೋನಾ ದಂತಹ ಸಂಧರ್ಭದಲ್ಲಿ ನಗರದಲ್ಲಿ ಸ್ವಚ್ಚತೆ ಆದ್ಯತೆ ನೀಡ ನಗರವನ್ನು ಸುಂದರವಾಗಿಟ್ಟು ಕೊಳಬೇಕು ಮಳೆಗಾಲ ಬಂದಿರುವದರಿಂದ ಡೆಂಗ್ಯೂ ದಂತಹ ರೋಗದ ಹರದಂತೆ ಕ್ರಮ ಕೈಗೋಳಿ ಎಂದು ಸಚಿವರು ಸೂಚಿಸಿದರು.
ಪ್ರವಾಹದಲ್ಲಿ ಮನೆ ಕಳೆದುಕೊಂಡು ಸೂಮಾರು 214 ಸಂತ್ರಸ್ತರಿಗೆ ಇನ್ನೂ 1 ಲಕ್ಷ ಹಣ ಜಮಾ ಆಗಿಲ್ಲ ಎಂದು ಸದಸ್ಯರೊಬ್ಬರು ಸಚಿವರ ಗಮನ ಹರಿಸಿದಾಗ ಕೂಡಲೆ ಮನೆಗಳ ಜೆಪಿಎಸ್ ಮಾಡಿಸಿ ಜಿಲ್ಲಾಧಿಕಾರಿಗಳಿಗೆ ಮರು ಸಲ್ಲಿಸಿ. ಜಿಲ್ಲಾಧಿಕಾರಿಗೊಳೊಂದಿಗೆ ಚರ್ಚಿಸಿ ಕೂಡಲೇ ಹಣ ಜಮಾವಣೆಗೆ ಕ್ರಮ ಜರುಗಿಸಲಾಗುವದು ಎಂದು ಸಚಿವರು ಹೇಳಿದರು
ಸಭೆಯಲ್ಲಿ ಪೌರಾಯುಕ್ತರು ಶಿವಾನಂದ ಹಿರೇಮಠ , ನಗರಸಭೆ ಸದಸ್ಯ ಎಸ್ .ಎ ಕೊತವಾಲ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ನಗರಸಭೆ ಸದಸ್ಯರು ಉಪಸ್ಥಿತರಿದ್ದರು .ಸಭೆಯ ನಂತರ ಸಚಿವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

Related posts: