ಗೋಕಾಕ:ಪಕ್ಷಿ ಸಂಕುಲ ಹಾಗೂ ಪರಿಸರ ಉಳಿವಿಗಾಗಿ ಪ್ರಯತ್ನಿಸಿ : ಕಿರಣ ದಾಸರಡ್ಡಿ
ಪಕ್ಷಿ ಸಂಕುಲ ಹಾಗೂ ಪರಿಸರ ಉಳಿವಿಗಾಗಿ ಪ್ರಯತ್ನಿಸಿ : ಕಿರಣ ದಾಸರಡ್ಡಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜೂ 6 :
ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಒಂದೂಂದೂ ಸಸಿ ನೆಟ್ಟು, ಪಕ್ಷಿ ಸಂಕುಲ ಹಾಗೂ ಪರಿಸರ ಉಳಿವಿಗಾಗಿ ಪ್ರಯತ್ನಿಸಬೇಕು ಎಂದು ಗೋಕಾಕ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಿರಣ ದಾಸರಡ್ಡಿ ಹೇಳಿದರು.
ಸಮೀಪದ ಯಾದವಾಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಳಗಾವಿ ಸಾಮಾಜಿಕ ಅರಣ್ಯ ಇಲಾಖೆ(ಜಿಪಂ), ಗೋಕಾಕ ವಲಯದ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಜೂನ್.5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವಿವಿಧ ಜಾತಿಯ ಸಸಿಗಳನ್ನು ರೈತರಿಗೆ ರಿಯಾಯತಿ ದರ ನೀಡಲಾಗುವುದು ರೈತರು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಳೆದ ವರ್ಷ ಯಾದವಾಡ ಗ್ರಾಮದ ಗೈರಾಣ ಪ್ರದೇಶದಲ್ಲಿ ಸುಮಾರು 4700 ಸಸಿಗಳನ್ನು ನೆಡಲಾಗಿತ್ತು, ಅವುಗಳಲ್ಲಿ ಈಗ 4500 ಸಸಿಗಳು ಬದುಕುಳಿದಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಪರಿಶ್ರಮ ಮತ್ತು ಸೇವೆಯನ್ನು ಸಾಮಾಜಿಕ ಅರಣಣ್ಯಾಧಿಕಾರಿ ಕಿರಣ ದಾಸರಡ್ಡಿ ಈ ವೇಳೆ ಶ್ಲಾಘಿಸಿದರು.
ಜಿಪಂ ಸದಸ್ಯ ಗೋವಿಂದ ಕೊಪ್ಪದ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಿಸರ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಅತ್ಯುತ್ತಮ ಸೇವಾ ಕಾರ್ಯ ನಿರ್ವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಅರ್ಜುನ ಜೊತೆನ್ನವರ, ಬಸವರಾಜ ಹೊಸಕೋಟಿ ಅವರನ್ನು ಸನ್ನಾನಿಸಲಾಯಿತು.
ತಾಪಂ ಸದಸ್ಯ ಶಂಕರ ಬೆಳಗಲಿ, ಪ್ರೌಢ ಶಾಲೆ ಮುಖ್ಯೋಪಾಧ್ಯಯ ಬಡಿಗೇರ, ಉಪವಲಯ ಅರಣ್ಯಾಧಿಕಾರಿಗಳಾದ ಸೀಮಾ ಕಾಮಟೆಕರ್, ಎಮ್.ಬಿ.ಭಾಗವಾನ್, ಅರಣ್ಯ ರಕ್ಷಕರಾದ ಮಹೇಶ ಬ್ಯಾಕೋಡ್, ವಿನಯ ಇಟ್ನಾಳ, ಅರ್ಜುನ ಹುಲಗಾನಿ, ಗೋಕಾಕ ವಲಯದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಅಧ್ಯಕ್ಷ-ಸದಸ್ಯರು ಸೇರಿದಂತೆ ಸ್ಥಳೀಯರು, ರೈತರು, ಇತರರು ಇದ್ದರು.