RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ : ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ : ಸಚಿವ ರಮೇಶ ಜಾರಕಿಹೊಳಿ 

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ : ಸಚಿವ ರಮೇಶ ಜಾರಕಿಹೊಳಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 7 :

 

ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದ್ದು , ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟಿ ಬೆಳೆಸಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕರೆ ನೀಡಿದರು
ರವಿವಾರದಂದು ತಾಲೂಕಿನ ಪುಡಕಲ್ಲಕಟ್ಟಿ ಗ್ರಾಮದಲ್ಲಿ ಜೈ ಜವಾನ ಜೈ ಕಿಸಾನ ಗ್ರಾಮೀಣ ಕೃಷಿ ಅಬಿವೃದ್ದಿ ಸಂಘ ದವರ ವನಮೋಹತ್ಸವ ಅಂಗವಾಗಿ ಆಯೋಜಿಸಿದ್ದ ಅರಣ್ಯ ಕೃಷಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು

ವನಮೋಹತ್ಸವ.ದಿನದಂದೆ ಪರಿಹರದ ಕಾಳಜಿ ಮಾಡದೆ ತಮ್ಮ ಜೀವನದ ಪ್ರತಿ ಕ್ಷಣದಲ್ಲಿಯೂ ಸಹ ಪರಿಸರ ಸಂರಕ್ಷಣೆ ಮಾಡಲು ಸಂಕಲ್ಪ ಮಾಡಬೇಕು ಅಂದಾಗ ಮಾತ್ರ ನಾವು ಆರೋಗ್ಯಕರ ಜೀವನ ನಡೆಸಲು ಸಾಧ್ಯ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಟಿ.ಆರ್ ಕಾಗಲ್ , ಮಡೆಇ ತೋಳಿನವರ , ಗ್ರಾಮದ ಹಿರಿಯರಾದ ಬಸವರಾಜ ಸದಾಶಿವಯ್ಯ , ಈಶ್ವರ ದೊಡಪ್ಪ ಬಾಗೋಜಿ , ಶಿವನಪ್ಪ ಜಲಕಟ್ಟಿ ,ಬಸವಣ್ಯಪ ಗೌಡರ ,ಈರಪ್ಪ ಬಾವನ್ನವರ , ಸಿದ್ದಗೌಡ ಪಾಟೀಲ ಸೇರಿದಂತೆ ಇತರರು ಇದ್ದರು

Related posts: