ಗೋಕಾಕ:ಸುವರ್ಣ ಸೌಧ ಆವರಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಮನವಿ
ಸುವರ್ಣ ಸೌಧ ಆವರಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 8 :
ಬೆಳಗಾವಿಯ ಸುವರ್ಣ ಸೌಧ ಆವರಣದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಬೃಹತ್ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಸಂಗೋಳ್ಳಿ ರಾಯಣ್ಣ ಸೇನೆ ಕರ್ನಾಟಕದ ಪದಾಧಿಕಾರಿಗಳು ಮತ್ತು ಗೋಕಾಕ ನಗರ ಮತ್ತು ಗ್ರಾಮೀಣ ಪ್ರದೇಶದ ಕುರುಬರ ಸಮಾಜ ವತಿಯಿಂದ ಸೋಮವಾರದಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ, ಸಂತೋಷ ಕಟ್ಟಿಕಾರ, ಬಲದೇವ ಸಣ್ಣಕ್ಕಿ, ಮಾರುತಿ ಜಿಂಗಿ, ಸುರೇಶ ಉಳ್ಳಾಗಡ್ಡಿ, ಗೋಪಾಲ ವಾಲೀಕಾರ, ಬಾಲಚಂದ್ರ ಬಣವಿ, ಭೀರಣ್ಣ ಮೈಲನ್ನವರ, ನಾಗರಾಜ ಗಲಗಲಿ, ಲೋಹಿತ ಸಣ್ಣಕ್ಕಿ, ಶಂಕರ ಧರೇನ್ನವರ, ರಾಜು ಕೀಣೆಕರಸೇರಿದಂತೆ ಅನೇಕರು ಇದ್ದರು.