ಗೋಕಾಕ:ನಕಲಿ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ
ನಕಲಿ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ :
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜೂ 11 :
ಗೋಕಾಕ ತಾಲೂಕು ಆರೋಗ್ಯಾಧಿಕಾರಿಗಳ ತಂಡ ನಗರದ ಬ್ಯಾಳಿ ಕಾಟಾ ಬಳಿಯಿರುವ ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿದರು. ಸೂಕ್ತ ದಾಖಲೆ ಇಲ್ಲದೇ ಕ್ಲೀನಿಕ್ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕ್ಲಿನಿಕ್ ಸೀಜ್ ಮಾಡಿದರು.
ಯಾವುದೇ ಪದವಿ ಇಲ್ಲದೇ ಗೋಕಾಕದ ಬ್ಯಾಳಿ ಕಾಟಾ ಬಳಿ ಕಟ್ಟಡದಲ್ಲಿ ಆಸ್ಪತ್ರೆ ನಡೆಸುತ್ತಿದ್ದ ನಕಲಿ ಕ್ಲಿನಿಕ್ ಮೇಲೆ ತಾಲೂಕ ವೈದ್ಯಾಧಿಕಾರಿ ನೇತೃತ್ವದಲ್ಲಿ ಡಾ.ಜಗದೀಶ್ ಕೆ ಜಿಂಗಿ ಗೋಕಾಕ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿತು.
ನಕಲಿ ವೈದ್ಯ ಅಬ್ದುಲ್ ರಶೀದ್ ಮಕಾಂದಾರ್ ಕ್ಲಿನಿಕನಲ್ಲಿ ತಂಡದ ಸದಸ್ಯರು ದಾಖಲೆ ಪರಿಶೀಲಿಸಿದರು. ಯಾವುದೇ ಪದವಿ ಇಲ್ಲದೇ ಆಸ್ಪತ್ರೆ ನಡೆಸುತ್ತಿದ್ದ ವೈದ್ಯನಿಗೆ ವಿಚಾರಿಸಿ, ಸೂಕ್ತ ದಾಖಲೆ ಇರದ ಹಿನ್ನೆಲೆ ಕ್ಲಿನಿಕ್ ಸೀಜ್ ಮಾಡಿದರು.
ನಕಲಿ ವೈದ್ಯ ಅಬ್ದುಲ್ ರಶೀದ್ ಮಕಾಂದಾರ್, ಹಲವು ವರ್ಷಗಳಿಂದ ನಕಲಿ ವೈದ್ಯನಾಗಿ ಜನರನ್ನು ಯಾಮಾರಿಸಿದ್ದ. ದಿನಕ್ಕೆ ಸುಮಾರು 50 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಈ ಎಲ್ಲ ಮಾಹಿತಿ ಸಂಗ್ರಹಿಸಿದ ತಾಲೂಕ ವೈದ್ಯಾಧಿಕಾರಿ ಡಾ.ಜಗದೀಶ್ ಕೆ ಜಿಂಗಿ ನೇತೃತ್ವದ ತಂಡದ ಅಧಿಕಾರಿಗಳು ಸಿಟಿ ಹೆಲ್ತ್ ಕ್ಲಿನಿಕ್ ಸೀಜ್ ಮಾಡಿದರು. ಕೆಪಿಎಂಇ ನಿಯಮಾನುಸಾರ ಸಿಟಿ ಹೆಲ್ತ್ ಕ್ಲಿನಿಕ್ ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.