ಬೆಳಗಾವಿ:ಸ್ವಾತಂತ್ರ್ಯ ಧರ್ಮಕ್ಕಾಗಿ ಬೃಹತ್ ಸಮಾವೇಶ : ಬೆಳಗಾವಿಯಲ್ಲಿ ಮೋಳಗಿದ ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಘೋಷ್ಯ
ಸ್ವಾತಂತ್ರ್ಯ ಧರ್ಮಕ್ಕಾಗಿ ಬೃಹತ್ ಸಮಾವೇಶ : ಬೆಳಗಾವಿಯಲ್ಲಿ ಮೋಳಗಿದ ಒಬ್ಬ ಲಿಂಗಾಯತ ಕೋಟಿ ಲಿಂಗಾಯತ ಘೋಷ್ಯ
ಬೆಳಗಾವಿ ಅ 22: ರಾಜ್ಯ ಸರಕಾರ ಆದಷ್ಟು ಬೇಗ ಕೇಂದ್ರ ಸರಕಾರಕ್ಕೆ ಲಿಂಗಾಯತ ಧರ್ಮ ಮಾನ್ಯತೆಗೆ ಶಿಫಾರಸು ಮಾಡಬೇಕು ಶಿಫಾರಸು ಮಾಡುವವರೆಗೆ ನಮ್ಮ ಹೋರಾಟ ಮುಂದೆವರೆಯುತ್ತದೆ ಎಂದು ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು
ನಗರದಲ್ಲಿ ಲಿಂಗಾಯತ ಧರ್ಮ ಮಾನ್ಯತೆಗೆ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಿಂಗಾಯತ ಪದ ಇಟ್ಟಿಕೊಂಡು ವಿರೋಧ ಮಾಡುವುದು ಬೇಡ, ನಮ್ಮ ಹಕ್ಕು ಕೇಳಲು ಅವಕಾಶ ಇದೆ ಎಂದು ಪ್ರತಿಪಾದಿಸಿದರು
ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಒತ್ತಾಯಿಸಿದ ಮಾತೆ ಮಹಾದೇವಿ, ವಚನಗಳೆ ನಮ್ಮ ಧರ್ಮ ಗ್ರಂಥ ಎಂದರು. ಇದಕ್ಕೂ ಮುನ್ನ ಅನಾರೋಗ್ಯದಿಂದ ಬಳಲುತ್ತಿರುವ ಮಾತೆ ಮಹಾದೇವಿ ಅವರು ಮಹಾಂತೇಶ ನಗರದ ಭಕ್ತರ ಮನೆಯಲ್ಲಿ ವಿಶ್ರಾಂತಿ ಪಡೆದು ಬಳಿಕ ಕಾರ್ಯಕ್ರಮಕ್ಕೆ ಹಾಜರಾದರು.
ಇನ್ನು ನಾಡಗೀತೆಯೊಂದಿಗೆ ಪ್ರಾರಂಭವಾದ ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶದಲ್ಲಿ ಗದಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀ, ಮುರುಘಾಮಠದ ಶಿವಮೂರ್ತಿ ಶ್ರೀ, ನಾಗನೂರು ಮಠದ ಸಿದ್ದರಾಮ ಶ್ರೀ, ಮಾತೆ ಮಹಾದೇವಿ ಸೇರಿ 50ಕ್ಕೂ ಅಧಿಕ ಸ್ವಾಮೀಜಿಗಳು ಭಾಗಿಯಾಗಿದ್ದರು
ಈ ಸಮಾವೇಶದಲ್ಲಿ ರಾಜಕೀಯ ನಾಯಕರಾದ ಸಚಿವ ವಿನಯ್ ಕುಲಕರ್ಣಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೇಬ್ಬಾಳ್ಕರ್, ಶಾಸಕ ಗಣೇಶ್ ಹುಕ್ಕೇರಿ, ಅಶೋಕ್ ಖೇಣಿ ಕೂಡ ಉಪಸ್ಥಿತರಿದ್ದರು