RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ನಗರವನ್ನು ಹಸಿರು ನಾಡನ್ನಾಗಿ ಮಾಡುವ ಅರಣ್ಯ ಇಲಾಖೆಯೊಂದಿಗೆ ಕೈ ಜೊಡಿಸಿ : ಲಾತೂರ

ಗೋಕಾಕ:ನಗರವನ್ನು ಹಸಿರು ನಾಡನ್ನಾಗಿ ಮಾಡುವ ಅರಣ್ಯ ಇಲಾಖೆಯೊಂದಿಗೆ ಕೈ ಜೊಡಿಸಿ : ಲಾತೂರ 

ನಗರವನ್ನು ಹಸಿರು ನಾಡನ್ನಾಗಿ ಮಾಡುವ ಅರಣ್ಯ ಇಲಾಖೆಯೊಂದಿಗೆ ಕೈ ಜೊಡಿಸಿ : ಲಾತೂರ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 12 :

 

 

ನಗರವನ್ನು ಹಸಿರು ನಾಡನ್ನಾಗಿ ಮಾಡುವ ಅರಣ್ಯ ಇಲಾಖೆಯವರ ಕಾರ್ಯದಲ್ಲಿ ಜನತೆಯು ಪಾಲ್ಗೊಳ್ಳುವಂತೆ ಜೆಸಿಐ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ ಹೇಳಿದರು.
ಶುಕ್ರವಾರದಂದು ಇಲ್ಲಿಯ ನಾಕಾ ನಂ-1ರ ಹತ್ತಿರವಿರುವ ಗಣೇಶ ನಗರದಲ್ಲಿ(ಜೋಡಟ್ಟಿ ಪ್ಲಾಟ) ಜೆಸಿಐ ಸಂಸ್ಥೆ ಹಾಗೂ ಅರಣ್ಯ ಇಲಾಖೆಯವರು ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದ್ದು ಎಲ್ಲರೂ ಪರಿಸರ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಸಂಘ-ಸಂಸ್ಥೆಗಳು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಅರಣ್ಯ ಇಲಾಖೆಯವರು ಪರಿಸರ ರಕ್ಷಣೆಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವುಗಳನ್ನು ಯಶಸ್ವಿಗೊಳಿಸಲು ನಾವೆಲ್ಲ ಶ್ರಮಿಸೋಣವೆಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ, ಉಪವಲಯ ಅರಣ್ಯಾಧಿಕಾರಿ ಎಚ್.ಎಸ್.ಇಂಗಳಗಿ, ಅರಣ್ಯ ರಕ್ಷಕ ಮಹಾಂತೇಶ ಜಾಮೋನೆ, ಜೆಸಿಐ ಸಂಸ್ಥೆಯ ಅಧ್ಯಕ್ಷ ರಜನಿಕಾಂತ ಮಾಳೋದೆ, ಪದಾಧಿಕಾರಿಗಳಾದ ಶೇಖರ ಉಳ್ಳೇಗಡ್ಡಿ, ರವಿ ಮಾಲದಿನ್ನಿ, ರಾಚಪ್ಪ ಅಮ್ಮಣಗಿ, ಕೆಂಪಣ್ಣ ಚಿಂಚಲಿ, ಪ್ರಕಾಶ ಬಿಳ್ಳೂರ, ಮನಿಷಾ ಮಾಳೋದೆ, ಭಾಗಿರಥಿ ನಂದಗಾಂವಿ ಸೇರಿದಂತೆ ಅನೇಕರು ಇದ್ದರು.

Related posts: