ನಾಡ ದ್ರೋಹಿ ಮನೋಹರ ಕಿಣೇಕರ ಕರ್ನಾಟಕ ಬಿಟ್ಟು ತೊಲಗಲಿ :: ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಗೋಕಾಕ : ಸರಕಾರಿ ಕಾಗದ ಪತ್ರಗಳನ್ನು ಮರಾಠಿ ಭಾಷೆಯಲ್ಲಿಯೇ ನೀಡಬೇಕೆಂದು ಒತ್ತಾಯಿಸಿ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ವಿಷಬೀಜ ಬಿತ್ತುತ್ತಿರುವ ನಾಡ ವಿರೋಧಿ ಎಂ.ಇ.ಎಸ್.ಮುಖಂಡ ಮನೋಹರ ಕಿಣೇಕರ ಕರ್ನಾಟಕ ಬಿಟ್ಟು ತೊಲಗಲಿ ಎಂದು ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕನ್ನಡ ನೆಲದಲ್ಲಿದ್ದುಕೊಂಡು ಕಾಗದ ಪತ್ರ, ನಾಮಫಲಕ, ಮತದಾರರ ಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮರಾಠಿಯಲ್ಲಿ ಬೇಡಲು ಇದು ಎಂ.ಇ.ಎಸ್. ಸ್ವತ್ತಲ್ಲ. ಬೆಳಗಾವಿಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಛಾಪಾಗಳು ಜಿಲ್ಲೆಯಲ್ಲಿ ಶಾಂತಿ ಸು-ವ್ಯವಸ್ಥೆಯನ್ನು ಹದಗೆಡೆಸುವ ಹುನ್ನಾರ ಮಾಡುತ್ತಿರುವುದು ತರವಲ್ಲ.
ಜಿಲ್ಲಾಡಳಿತ ಇವರ ಮನವಿಯನ್ನು ಕಸದ ಬುಟ್ಟಿಗೆ ಹಾಕಿ, ಕನ್ನಡದ ಬಗ್ಗೆ ತಗಾದೆ ತಗೆಯುತ್ತಿರುವ ಎಂ.ಇ.ಎಸ್.ಛಾಪಾಗಳಿಗೆ ಖಡಕ್ ಎಚ್ಚರಿಕೆ ನೀಡಬೇಕೆಂದು ಖಾನಪ್ಪನವರ ಆಗ್ರಹಿಸಿದ್ದಾರಲ್ಲದೆ ಮುಂಬರುವ ದಿನಗಳಲ್ಲಿ ಇಂತಹ ತಗಾದೆ ತಗೆಯುತ್ತಿರುವವರ ವಿರುದ್ಧ “ ಕರ್ನಾಟಕ ಬಿಟ್ಟು ತೊಲಗಿ” ಎಂದು ಚಳುವಳಿ ನಡೆಸಲಾಗುವುದೆಂದು ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ